ದೇಶದ ನೇತೃತ್ವ ವಹಿಸಲು ರಾಹುಲ್ ರವರನ್ನು ಜನತೆ ಬಯಸಿದರೆ ಸಾಕು : ಅಶೋಕ್ ಕುಮಾರ್ ಕೊಡವೂರು

Spread the love

ದೇಶದ ನೇತೃತ್ವ ವಹಿಸಲು ರಾಹುಲ್ ರವರನ್ನು ಜನತೆ ಬಯಸಿದರೆ ಸಾಕು : ಅಶೋಕ್ ಕುಮಾರ್ ಕೊಡವೂರು

ಉಡುಪಿ: ಜೋಡೋ ಪಾದಯಾತ್ರೆಯ ಜನಾಕರ್ಷಣೆ ಸಹಜವಾಗಿಯೇ ರಾಹುಲ್ ಗಾಂಧಿಯನ್ನು ದೈಹಿಕವಾಗಿ ಮತ್ತು ಮಾನಸೀಕವಾಗಿ ಬಲಾಢ್ಯ ಗೊಳಿಸಿದೆ ˌಸಚಿವೆ ಶೋಭಾ ಕೆರಂದ್ಲಾಜೆಗೆ ರಾಹುಲ್ ರವರ ಪಿಟ್ನೇಸ್ ಬಗ್ಗೆ ನಂಬಿಕೆ ಬಂದಿದೆ ಎಂದಾದರೆ ರಾಹುಲ್ ರವರು ಇಂದು ಜನಾಕಾರ್ಷನೆಯ ಕೇಂದ್ರ ಬಿಂದು ಆಗುತ್ತಿರುವುದು ಕಾಣುದಿಲ್ಲವೇ ?ˌ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಶ್ನಿಸಿದೆ ˌ

ಭಾರತ್ ಜೋಡೋ ಪಾದಯಾತ್ರೆಯ ಅಂತಿಮಗುರಿ ಬಿಜೆಪಿ ಆಡಳಿತದಿಂದ ಮುರಿದು ಹಳಿ ತಪ್ಪಿದ ಈ ದೇಶದ ಸಮಗ್ರತೆ, ಸೌಹಾರ್ಧತೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕತೆಯನ್ನು ಹಳಿಗೆ ತಂದು ಮರುಜೋಡಿಸುವುದೇ ಆಗಿದೆ ˌ ಅಷ್ಟಕ್ಕೂ ದೇಶದ ಜನತೆ ರಾಹುಲ್ ಅವರಲ್ಲಿ ನಂಬಿಕೆ ಇಟ್ಟು ಅವರನ್ನು ಬಯಸಿದಲ್ಲಿ ಅದನ್ನು ತಪ್ಪಿಸುವ ಶಕ್ತಿ ಬಿಜೆಪಿಗಿಲ್ಲ ಎಂದಿರುವ ಕಾಂಗ್ರೆಸ್, ಅಧಿಕಾರಕ್ಕಾಗಿ ಹೆಣದ ಮೇಲೆ ರಾಜಕೀಯ ಮಾಡುವ ಶೋಭಾ ಕೆರಂದ್ಲಾಜೆಯಂತವರಿಗೆ ರಾಹುಲ್ ಗಾಂಧಿಯವರ ಸಾಮಾಜಿಕ ಸಂಸ್ಕೃತಿ ಮತ್ತು ರಾಜಕೀಯ ಸಂಸ್ಕಾರ ಅರ್ಥ ಆಗಲು ಸಾಧ್ಯವಿಲ್ಲ ಎಂದು ಠೀಕಿಸಿದೆˌ ಶೋಭರವರು ರಾಹುಲ್ ರವರ ಫಿಟ್ನೇಸ್ ಬಗ್ಗೆ ಕಾಳಜಿ ತೋರಿಸುವ ಬದಲು ಅವರು ಎತ್ತಿರುವ ದೇಶದ ಸಮಸ್ಯೆಗಳಾದ ಹಣದುಬ್ಬರˌ ನಿರುದ್ಯೋಗ ಹಾಗೂ ಜನಸಾಮಾನ್ಯರು ಉಪಯೋಗಿಸುವ ಹೆಚ್ಚಿನ ವಸ್ತುಗಳಿಗೆ ಶೇ 18 ರಷ್ಟು ಜಿಎಸ್ ಟಿ ವಿಧಿಸಲು ಕಾರಣವೇನು ಕೃಷಿ ಟ್ರ್ಯಾಕ್ಟರ್ ಗಳಿಗೆ 12 ಶೇಕಡಾ ಜಿಎಸ್ ಟಿ ತೆರಿಗೆ ವಿಧಿಸಲು ಕಾರಣವೇನೆಂದು ಉತ್ತರಿಸಲಿ ˌ

ದೇಶದಲ್ಲಿ ನಿರ್ಭಯಾ ಪ್ರಕರಣದ ಬಳಿಕದ ಸಾಂವಿಧಾನಿಕ ತಿದ್ದುಪಡಿಯ ಹೊರತಾಗಿಯೂ ಅಪ್ರಾಪ್ತ ಮಕ್ಕಳು, ಮಹಿಳೆಯರು ಮತ್ತು ದಲಿತರ ಮೇಲೆ ನಡೆದ ಲೈಂಗಿಕ ದೌರ್ಜನ್ಯ, ಕೊಲೆ, ಸುಲಿಗೆಗಳನ್ನು ತಡೆಯುವ ಇಚ್ಛಾ ಶಕ್ತಿ
ಪ್ರಧಾನಿ ಮೋದಿ ಸರಕಾರಕ್ಕಿಲ್ಲ. ಈಗಾಗಲೇ ಕರ್ನಾಟಕವೂ ಸೇರಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ಸುಮಾರು 518ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಯಾವುದೇ ಪ್ರಕರಣಗಳು ತಾರ್ಕಿಕ ಅಂತ್ಯವನ್ನು ಕಂಡಿಲ್ಲ‌. ಒಬ್ಬ ಮಹಿಳೆಯಾಗಿ ಇದಕ್ಕೆ ಉತ್ತರಿಸುವ ಶಕ್ತಿ ಶೋಭಾ ಕೆರಂದ್ಲಾಜೆಯವರಿಗಿಲ್ಲ. ಯಾಕೆಂದರೆ ಅಂಬೇಡ್ಕರ್ ಸಂವಿಧಾನವನ್ನು ಬದಲಿಸ ಹೊರಟವರಿಗೆ ತುಳಿತಕ್ಕೊಳಗಾದ ಜನರ ಸಂಕಷ್ಟ ಅರ್ಥ ಆಗಲು ಸಾಧ್ಯವಿಲ್ಲ. ಇಂತವರನ್ನು ಈ ದೇಶದ ಜನ ಮುಂದಿನ ಚುನಾವಣೆಯಲ್ಲಿ ಮತ್ತೆ ಬೀದಿ ಬದಿಯಲ್ಲಿ ಪಕೋಡಾ ಮಾರಲು ಕಳುಹಿಸಿದ್ದಲ್ಲಿ ಆಶ್ಚರ್ಯ ಇಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ‌.


Spread the love