ದೇಶದ ಬೆಳವಣಿಗೆಗೆ ಆರೆಸ್ಸೆಸ್ ಕೊಡುಗೆ ಏನು? – ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಪ್ರಶ್ನೆ

Spread the love

ದೇಶದ ಬೆಳವಣಿಗೆಗೆ ಆರೆಸ್ಸೆಸ್ ಕೊಡುಗೆ ಏನು? – ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಪ್ರಶ್ನೆ

ಉಡುಪಿ: ದೇಶದ ಬೆಳವಣಿಗೆಗೆ ಆರೆಸ್ಸೆಸ್ ಕೊಡುಗೆ ಏನು? ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಆರೆಸ್ಸೆಸ್ ಗೆ ನಂಬಿಕೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದ್ದಾರೆ.

ಅವರು ಗುರುವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಆರ್ ಎಸ್ ಎಸ್ ನ್ನು ತಾಲಿಬಾನ್ ಜೊತೆ ಹೊಲಿಸಿದ್ದೆ ನಿಜ ಆದರೆ ಎಲ್ಲಾ ವಿಷಯಗಳಲ್ಲೂ ತಾಲಿಬಾನ್ ಎಂದು ಹೋಲಿಕೆ ಮಾಡಿರಲಿಲ್ಲ ಕೆಲವೊಂದು ವಿಚಾರಗಳಲ್ಲಿ ತಾಲಿಬಾನ್ ಜತೆ ಹೋಲಿಕೆ ಮಾಡಿದ್ದೆ. ಸ್ವತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಬಂದ ನಂತರ ದೇಶದ ಆರ್ಥಿಕ ಬೆಳವಣಿಗೆಗೆ ಅವರ ಕೊಡುಗೆ ಏನು? ಆರ್ ಎಸ್ ಎಸ್ ನವರು ಮನುವಾದ, ಶ್ರೇಣೀಕೃತ ಸಮಾಜದ ಪ್ರತಿಪಾದಕರು ಆದರೆ ಕಾಂಗ್ರೆಸ್ ಪಕ್ಷ ಜಾತ್ಯತೀತ ನಿಲುವಿಗೆ ಬದ್ಧವಾಗಿರುವ ಪಕ್ಷ ಪರಿಷತ್ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಎಲ್ಲರಿಗೂ ನಾವು ಅವಕಾಶ ನೀಡಿದ್ದೇವೆ ಎಂದರು.

ಮಂಜುನಾಥ ಭಂಡಾರಿಯವರು ಆರಂಭದಿಂದಲೂ ಎನ್ಎಸ್ ಯು ಐ ಕಾರ್ಯಕರ್ತರಾಗಿ ಕೆಲಸ ಮಾಡಿದ್ದು, ಯೂತ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಮಂಜುನಾಥ ಭಂಡಾರಿ ಆರೆಸ್ಸೆಸ್ ಹಿನ್ನೆಲೆಯವರಲ್ಲ ಇವೆಲ್ಲಾ ಕೇವಲ ಊಹಾಪೋಹಗಳು ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ವದಂತಿ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಬೆಂಗಳೂರಿನಲ್ಲಿ ನಡೆದ ಸದಸ್ಯತ್ವ ನೋಂದಣಿ ಸಭೆಯಲ್ಲಿ ಪ್ರಮೋದ್ ಭಾಗವಹಿಸಿದ್ದರು ಅಲ್ಲದೆ ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಚಾರದ ನೇತೃತ್ವ ವಹಿಸಿ ಉಪಚುನಾವಣೆ ಕಾರ್ಯದಲ್ಲಿ 15 ದಿನ ಭಾಗವಹಿಸಿದ್ದರು.

ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಆದರೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ ಪ್ರಮೋದ್ ಜೊತೆ ಸಮಾಲೋಚನೆ ಮಾಡುತ್ತೇನೆ ಎಂದರು.

ಈ ವೇಳೆ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ನಾಯಕರಾದ ಎಮ್‌ ಎ ಗಫೂರ್‌, ಸುನೀಲ್‌ ಡಿ ಬಂಗೇರಾ ಹಾಗೂ ಇತರರು ಉಪಸ್ಥಿತರಿದ್ದರು


Spread the love