
ದೇಶವನ್ನು ಲೂಟಿ ಮಾಡಿದವರನ್ನು ಕಳ್ಳ ಎನ್ನುವುದು ತಪ್ಪಾ? – ಬಿ ಕೆ ಹರಿಪ್ರಸಾದ್
ಮಂಗಳೂರು: ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ಖಂಡಿಸಿ ದಕ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ವಿರೋಧಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಪ್ರಜಾಪ್ರಭುತ್ವ ಬುಡಮೇಲು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಕ್ಷುಲ್ಲಕ ಕಾರಣಕ್ಕೆ ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿರುವುದು ಬಿಜೆಪಿ ಕುತಂತ್ರವನ್ನು ಎತ್ತಿ ತೋರಿಸುತ್ತದೆ. ಕಳ್ಳರನ್ನು ಕಳ್ಳ ಎನ್ನುವುದರಲ್ಲಿ ತಪ್ಪೇನಿದೆ ರಾಷ್ಟ್ರ ಮತ್ತು ರಾಜ್ಯದ ಹಣವನ್ನು ಲೂಟಿ ಮಾಡಿದವರನ್ನು ಕಳ್ಳರು ಎಂದು ಕರೆಯುವುದು ತಪ್ಪಾ ಎಂದು ಪ್ರಶ್ನಿಸಿದರು.
ನೀರವ್ ಮೋದಿ, ಲಲಿತ್ ಮೋದಿ ಮುಕುಲ್ ಚೋಕ್ಸಿ ದೇಶವನ್ನು ಕೊಳ್ಳೆ ಹೊಡೆದು ವಿದೇಶದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಬಿಜೆಪಿಯವರು ಬೇಕಿದ್ದರೆ ಕಳ್ಳರನ್ನು ಸತ್ಯ ಹರಿಶ್ಚಂದ್ರ ಎಂದು ಕರೆಯಲಿ ಆದರೆ ನಾವು ಕಳ್ಳರೆಲ್ಲಾ ಮೋದಿ ಹೆಸರನ್ನು ಇಟ್ಟು ಕೊಂಡಿದ್ದಾರೆ ಎಂದು ಹೇಳುತ್ತೇವೆ. ರಾಹುಲ್ ಗಾಂಧಿಯನ್ನು ಈ ಹೇಳಿಕೆಗಾಗಿ ಜೈಲಿಗೆ ಹಾಕುವುದಾದರೆ ನಾವೂ ಕೂಡ ಜೈಲಿಗೆ ಹೋಗಲು ಸಿದ್ದ ಎಂದು ಆಕ್ರೋಶ ಹೊರ ಹಾಕಿದರು.
ಈ ವೇಳೆ ನಾಯಕರಾದ ಯು ಟಿ ಖಾದರ್, ಕೆ ಹರೀಶ್ ಕುಮಾರ್, ಅಭಯ ಚಂದ್ರ ಜೈನ್, ಐವನ್ ಡಿ ಸೋಜಾ, ಜೆ ಆರ್ ಲೋಬೊ, ಶಕುಂತಲಾ ಶೆಟ್ಟಿ, ಮೊಯಿದಿನ್ ಭಾವ, ಶಶಿಧರ್ ಹೆಗ್ಡೆ, ಲುಕ್ಮನ್ ಬಂಟ್ವಾಳ್, ಶಾಲೆಟ್ ಪಿಂಟೋ, ವಿಶ್ವಾಸ್ ದಾಸ್, ನವೀನ್ ಡಿ ಸೋಜಾ, ಪುರೊಸೋತ್ತಮ ಚಿತ್ರಪುರ, ಸಾವಾದ್ ಸುಳ್ಯ, ಜೋಕಿಮ್ ಡಿ ಸೋಜಾ,ಉಮೇಶ್ ದಂಡಿಕೇರಿ, ಲಾರೆನ್ಸ್ ಡಿ ಸೋಜಾ, ಸಂತೋಷ್ ಶೆಟ್ಟಿ, ಅಬ್ದುಲ್ ರವೂಫ್, ಲ್ಯಾನ್ಸ್ ಲಾಟ್ ಪಿಂಟೋ, ಅಪ್ಪಿ, ರಮಾನಂದ ಪೂಜಾರಿ, ಎ ಸಿ ವಿನಾಯರಾಜ್, ಪ್ರತಿಭಾ ಕುಳಾಯಿ,ಮುಹಮ್ಮದ್ ಬಡಗನ್ನೂರ್, dr ರಾಜಾರಾಮ್, ಪ್ರವೀಣ್ ಅಲ್ವಾ, ಸದಾಶಿವ ಶೆಟ್ಟಿ, ಆಶೀತ್ ಪಿರೇರ, ರೆಹಮನ್ ಕುಂಜತ್ಬೈಲ್ ಆಳ್ವಿನ್ ಪ್ರಕಾಶ್, ಮಂಜುಳಾ ನಾಯಕ್, ಶಾಂತಲಾ ಗಟ್ಟಿ, ಟಿ ಹೊನ್ನಯ್ಯ, ದೀಪಕ್ ಪೂಜಾರಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಾಕೇಶ್ ದೇವಾಡಿಗ, ಸ್ಟಾನಿ ಅಲ್ವಾರಿಸ್ ಹಾಗೂ ಇತರರು ಉಪಸ್ಥಿತರಿದ್ದರು.