ದೈವರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪಿ ಬಂಧನ

Spread the love

ದೈವರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪಿ ಬಂಧನ

ಮಂಗಳೂರು: ತುಳುನಾಡಿನ ದೈವರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಂಗಳೂರು ಅಮೃತಹಳ್ಳಿ ನಿವಾಸಿ ಶಿವರಾಜ್ ಹೆಚ್ ಕೆ (37) ಎಂದು ಗುರುತಿಸಲಾಗಿದೆ.

ಟ್ವೀಟ್ಟರ್ ನಲ್ಲಿ ನಕಲಿ ಖಾತೆಯ ಮೂಲಕ ತುಳುನಾಡಿನ ದೈವಾರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಬಗ್ಗೆ ತುಳುನಾಡಿನ ದೈವರಾಧಣೆ ಸಂರಕ್ಷಣಾ ಯುವ ವೇದಿಕೆ ಯವರು ನೀಡಿದ ದೂರಿನಂತೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣದ ಆರೋಪಿಯನ್ನು ಶಿವರಾಜ್ ನನ್ನು ಬಂಧಿಸಿ 7 ನೇ ಜೆಎಂ ಎಫ್ ಸಿ ನ್ಯಾಯಾಲಯ ಮಂಗಳೂರು ಹಾಜರುಪಡಿಸಲಾಗಿದೆ.

ಈ ಪ್ರಕರಣದಲ್ಲಿನ ಆರೋಪಿ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್ ಜೈನ್ ರವರ ಮಾರ್ಗದರ್ಶನದಂತೆ, ಸಿಸಿಬಿ ಘಟಕದ ಎಸಿಪಿಯವಾರದ ಪಿ ಎ ಹೆಗ್ಡೆ ರವರ ನೇತೃತ್ವದಲ್ಲಿ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ಎಂ ಪಿ ಹಾಗೂ ಸಿಬಂದಿಯವರು ಪಾಲ್ಗೊಂಡಿದ್ದರು.


Spread the love