ದೈಹಿಕ, ಮಾನಸಿಕ ಆರೋಗ್ಯಕ್ಕೆ ಆರ್ಯುವೇದ ಅತಿ ಉತ್ತಮ: ಸಿಇಓ ಕುಮಾರ್

Spread the love

ದೈಹಿಕ, ಮಾನಸಿಕ ಆರೋಗ್ಯಕ್ಕೆ ಆರ್ಯುವೇದ ಅತಿ ಉತ್ತಮ: ಸಿಇಓ ಕುಮಾರ್

ಮಂಗಳೂರು: ಆಯುರ್ವೇದ ಪದ್ದತಿಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಸ್ಥಿರತೆಯನ್ನು ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಅವರು ಅಭಿಪ್ರಾಯಪಟ್ಟರು.

ಅವರು ಜು.5ರ ಸೋಮವಾರ ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಾಟಿ ವೈದ್ಯರ ಪರಿಚಯ ಹಾಗೂ ಅನುಭವ ಹಂಚಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಅತಿ ಪುರಾತನ ಪರಂಪರಾ ಪದ್ದತಿಯಾದ ಆರ್ಯುವೇದಕ್ಕೆ ಹಲವಾರು ಋಷಿಮುನಿಗಳು ನೀಡಿರುವ ಕೊಡುಗೆ ಗಮರ್ನಾಹ, ಅವುಗಳು ನಮ್ಮ ಸ್ವಂತಿಕೆಯ ಪ್ರತೀಕವಾಗಿದೆ ಎಂದರು.

ಆರ್ಯುವೇದ ತಿಳಿಸಿರುವ ಪ್ರಕಾರದ ಆಹಾರ ಕ್ರಮದಿಂದ ದೇಹದ ಸಂಪೂರ್ಣ ಆರೋಗ್ಯ ಜತೆಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು. ಆಯುರ್ವೇದವು ಹಿಂದಿನಿಂದಲೂ ಕೆಲವೊಂದು ಔಷಧೀಯ ಗುಣಗಳನ್ನು ಹೊಂದಿರುವ ಆಹಾರ ಕ್ರಮಗಳ ಬಗ್ಗೆ ವಿವರ ನೀಡುತ್ತದೆ, ಇದೆಲ್ಲವೂ ತುಂಬಾ ನೈಸರ್ಗಿಕವಾಗಿದ್ದು ಎಂದರು.

ಪ್ರಕೃತಿಯಲ್ಲಿ ದೊರೆಯುವ ಆಹಾರ ಬಳಸಿಕೊಂಡರೆ, ಖಂಡಿತವಾಗಿಯೂ ಹೆಚ್ಚು ಲಾಭ ಪಡೆಯಬಹುದು ಹಾಗೂ ಅನಾರೋಗ್ಯವನ್ನು ದೂರವಿಡಬಹುದು, ದೇಹವು ಒಳಗಿನಿಂದ ತುಂಬಾ ಪ್ರಭಲವಾಗಿದ್ದರೆ, ವೈರಸ್ ಹಾಗೂ ಬ್ಯಾಕ್ಟೀರಿಯಾಗಳಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗುವುದು, ಯುವಪೀಳಿಗೆಯು ಆಯುರ್ವೇದ ಪದ್ಧತಿಯನ್ನು ಅನುಸರಿಸುವಂತೆ ಅವರು ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ನಾಟಿ ವೈದ್ಯರಾದ ಬಿಲ್ಲಂಪದವು ನಾರಾಯಣ ಭಟ್, ಬಾಲಕೃಷ್ಣ ರೈ ಚಿಲುಮೆತ್ತಾರು, ಪೂವಪ್ಪ ಎಮಾಜೆ, ಕಾಲೇಜಿನ ಪ್ರಾಂಶುಪಾಲ ಡಾ. ಪ್ರೇಮಲತಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love