ದೈಹಿಕ ಸ್ವಾಧೀನತೆ ಕಳೆದುಕೊಂಡರೂ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶ್ರೀ ರಕ್ಷಾ

Spread the love

ದೈಹಿಕ ಸ್ವಾಧೀನತೆ ಕಳೆದುಕೊಂಡರೂ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶ್ರೀ ರಕ್ಷಾ

ಕುಂದಾಪುರ: ದೈಹಿಕ ಸ್ವಾಧೀನತೆ ಕಳೆದುಕೊಂಡು ತಾಯಿ ಮಡಿಲಲ್ಲಿ ಕೂತು ಮಾಡಿದ ಆಶುಭಾಷಣ ಸ್ಪರ್ಧೆಯಲ್ಲಿ ಇಲ್ಲಿನ ನಾಡಾ ಗ್ರಾಮದ ಕಡ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷಾ ಕಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಪಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾದ್ದಾಳೆ.

ಕೋಣ್ಕಿ ಹೊಟೇಲ್ ಕಾರ್ಮಿಕ ಶ್ರೀಧರ ಶೆಟ್ಟಿ ಹಾಗೂ ಕೋಣ್ಕಿ ಶಾಲೆ ಮುಖ್ಯ ಅಡುಗೆ ಸಿಬ್ಬಂದಿ ಗೀತಾ ದಂಪತಿಗಳ ಪುತ್ರಿ ಶ್ರೀರಕ್ಷಾ ಕಲಿಯುವಿಕೆಯಲ್ಲಿಯೂ ಶಾಲೆಗೆ ಮೊದಲ ಸ್ಥಾನದಲ್ಲಿದ್ದಾಳೆ. ಪಠ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಶ್ರೀರಕ್ಷಾ ಕ್ವಿಜ್, ಭಾಷಣ, ಸಂಗೀತ ಸೇರಿದಂತೆ ಮೊದಲಾದ ಸಾಂಸ್ಕೃತಿಕ‌ ಚಟುವಟಿಕೆಗಳಲ್ಲಿ ಅಗ್ರಪಂಕ್ತಿಲ್ಲಿದ್ದಾಳೆ.

ಶ್ರೀರಕ್ಷಾಳ ತಾಯಿ ಗೀತಾ ಅಡುಗೆಗೆ ಬರುವಾಗ ಮಗಳನ್ನು ಎತ್ತಿಕೊಂಡು ಬರುತ್ತಿದ್ದು, ಶಾಲೆಯಲ್ಲಿ ಈಕೆಗೆ ವೀಲ್ ಚೇರ್ ವ್ಯವಸ್ಥೆ ಮಾಡಿದ್ದಾರೆ. ಶಾಲೆ ಸಹಪಾಠಿ ಶಾರ್ವರಿ ಶಾಲೆಯಲ್ಲಿ ಶ್ರೀರಕ್ಷಾಳ ಊಟ ಮಾಡಿಸುವುದರಿಂದ ಉಳಿದ ಎಲ್ಲಾ ಸಮಯದಲ್ಲಿ ನೆರಳಾಗಿರುತ್ತಾಳೆ.

ಗೀತಾ ಪೋಷಕರಿಗೆ ಮನೆಯೊಂದು ಬಿಟ್ಟರೆ ಮತ್ತಾವುದೇ ಮೂಲವಿಲ್ಲದಿದ್ದರೂ ಮಗಳಿಗೆ ಉತ್ತಮ ಶಿಕ್ಷಣ ಕೊಡುವ ಸಂಕಲ್ಪ ಮಾಡಿದ್ದು, ಎರಡನೇ ಮಗಳು ಪ್ರತೀಕ್ಷಾ ಅಕ್ಕ ಓದುವ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.


Spread the love

Leave a Reply

Please enter your comment!
Please enter your name here