Home Mangalorean News Kannada News ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಗಾಯಾಳು ಎಎಸ್ಸೈ ಪುತ್ರಿ ಮೃತ್ಯು

ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಗಾಯಾಳು ಎಎಸ್ಸೈ ಪುತ್ರಿ ಮೃತ್ಯು

Spread the love

ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಗಾಯಾಳು ಎಎಸ್ಸೈ ಪುತ್ರಿ ಮೃತ್ಯು

ಉಡುಪಿ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹ ಸವಾರೆಯೊಬ್ಬರು ಮೃತಪಟ್ಟ ಘಟನೆ ನಿಟ್ಟೂರು ಕೆಎಸ್ಆರ್ಟಿಸಿ ಡಿಪ್ಪೋ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ.26ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಶಿರ್ವ ಪೊಲೀಸ್ ಠಾಣಾ ಎಎಸ್ಸೈ ಸುದೇಶ್ ಶೆಟ್ಟಿ ಅವರ ಮಗಳು ಸ್ವರ್ಷ (24) ಎಂದು ಗುರುತಿಸಲಾಗಿದೆ. ಸವಾರೆ ಮೃತರ ತಾಯಿ ಶರ್ಮಿಳಾ (49) ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾವಳಿ ಬೈಪಾಸ್ ಕಡೆಯಿಂದ ಸಂತೆಕಟ್ಟೆ ಕಡೆಗೆ ಸಾಗುತ್ತಿದ್ದ ಕಾರು ಎದುರಿನಿಂದ ಹೋಗುತ್ತಿದ್ದ ಸ್ಕೂಟರ್ಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಇಬ್ಬರು ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದರೆನ್ನಲಾಗಿದೆ. ಗಾಯಗೊಂಡ ಶರ್ಮಿಳಾ ಮತ್ತು ಸ್ವರ್ಷ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಸ್ಪರ್ಷ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version