ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿಯ ಮಾಧುರ್ಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್

Spread the love

ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿಯ ಮಾಧುರ್ಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್

ಉಡುಪಿ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಮಾಧುರ್ಯ ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ.

ಉಡುಪಿ ಶಿರಿಬೀಡು ನಿವಾಸಿ, ಉಡುಪಿ ಎಸ್‌ಬಿಐ ಉದ್ಯೋಗಿ ಕೆ. ಮುರಳೀಧರ್ ಹಾಗೂ ರಾಜಲಕ್ಷ್ಮೀ ದಂಪತಿ ಪುತ್ರಿಯಾಗಿರುವ ಮಾಧುರ್ಯ, ಕಂಪ್ಯೂಟರ್‌ನಲ್ಲಿ 100, ಸಂಸ್ಕೃತದಲ್ಲಿ 100, ಬ್ಯುಸಿನೆಸ್ ಸ್ಟಡಿಸ್‌ಯಲ್ಲಿ 100, ಅಕೌಂಟೆನ್ಸಿ 99, ಸ್ಟಾಟಿಸ್ಟಿಕ್ಸ್ 99, ಇಂಗ್ಲಿಷ್ ನಲ್ಲಿ 96 ಅಂಕಗಳನ್ನು ಗಳಿಸಿದ್ದಾರೆ.

ನಾನು ಟ್ಯೂಷನ್ ಹೋಗದೆ ಮನೆಯಲ್ಲೇ ಅಭ್ಯಾಸ ಮಾಡುತ್ತಿದ್ದೆ. ತಂದೆ ತಾಯಿ ಮತ್ತು ಉಪನ್ಯಾಸಕರ ಪೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯ ವಾಯಿತು. ಮುಂದೆ ಸಿಎ ಆಗಬೇಕು ಎಂಬುದು ನನ್ನ ಆಸೆ ಎಂದು ಮಾಧುರ್ಯ ತಿಳಿಸಿದರು.


Spread the love