ದ್ವಿತೀಯ ಪಿಯುಸಿ ಮಧ್ಯಾವದಿ ಪರೀಕ್ಷೆ ಮುಂದೂಡಲು ಆಗ್ರಹಿಸಿ ಎನ್‌ ಎಸ್‌ ಯು ಐ ಪ್ರತಿಭಟನೆ

Spread the love

ದ್ವಿತೀಯ ಪಿಯುಸಿ ಮಧ್ಯಾವದಿ ಪರೀಕ್ಷೆ ಮುಂದೂಡಲು ಆಗ್ರಹಿಸಿ ಎನ್‌ ಎಸ್‌ ಯು ಐ ಪ್ರತಿಭಟನೆ

ಮಂಗಳೂರು: ದ್ವಿತೀಯ ಪಿಯುಸಿ ಮಧ್ಯವಾದಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಎನ್.ಎಸ್.ಯು.ಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ನೇತೃತ್ವದಲ್ಲಿ ಬುಧವಾರ ನಗರದ ಕ್ಲಾಕ್ ಟವರ್ ಎದುರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸವಾದ್ ಸುಳ್ಯ, ಸರಕಾರ ಒಂದು ಕಡೆ ಮಾಧ್ಯಮದ ಮುಖಾಂತರ ಒಮಿಕ್ರಾನ್ ಕೋವಿಡ್ ಮೂರನೇ ಅಲೆಯ ಬಗ್ಗೆ ಭಯಭೀತಿಯನ್ನಾಗಿಸಿ ಎರಡು ವ್ಯಾಕ್ಸಿನ್ ತೆಗೆಯದೆ ಮಾಲ್ ಗಳಿಗೆ ಇನ್ನಿತರ ಕಾರ್ಯಚಟುವಟಿಕೆಗಳಿಗೆ ನಿಬಂಧನೆ ಹೇರಿ ಏಕಾಏಕಿ ಒಂದೂ ವ್ಯಾಕ್ಸಿನನ್ನು ಪಡೆಯದ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನ ನಡೆಸುವ ಮುಖಾಂತರ ಸರ್ಕಾರ ಬೇಜಬ್ದಾರಿಯಿಂದ ವಿದ್ಯಾರ್ಥಿ ಪರ ಕಾಳಜಿ ಇಲ್ಲದೆ ವರ್ತಿಸುತ್ತಿದೆ. ತಕ್ಷಣ ಪರೀಕ್ಷೆಯನ್ನು ಮುಂದೂಡಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿರುವ ಆತಂಕವನ್ನು ದೂರಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಳವಾಡುತ್ತಿದೆ. ನಮ್ಮ ಬೇಡಿಕೆಯನ್ನು ಮುಂದಿಟ್ಟು ಶಾಂತಿಯುತವಾಗಿ ಪ್ರತಿಭಟಿಸುವ ರಾಜ್ಯ ಎನ್.ಎಸ್.ಯು.ಐ ನಾಯಕರು ಮತ್ತು ವಿದ್ಯಾರ್ಥಿಗಳನ್ನು ಇಂದು ಬೆಂಗಳೂರಿನಲ್ಲಿ ಬಂಧಿಸಿರುವುದು ಖಂಡನೀಯ ಎಂದರು.

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ಮುಖಂಡರಾದ ಪವನ್ ಸಾಲ್ಯಾನ್, ಶಫೀಕ್, ಅಯಾಝ್ ಚಾರ್ಮಾಡಿ, ನಝೀಬ್, ನಿಖಿಲ್, ಅಯಾನ್, ಸಾರ್ಥಕ್, ರಿಲ್ವಾನ್, ಶಕೀಲ್, ಅಹ್ನಾಫ್, ಸಾರ್ಥಕ್, ಶೌನಕ್ ಮತ್ತಿತರರು ಉಪಸ್ಥಿತರಿದ್ದರು.


Spread the love