ದ್ವೇಷ ಭಾವನೆ ಮೂಡಿಸುವ ಬ್ಯಾನರ್ ಅಳವಡಿಸುವವರ ವಿರುದ್ದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ – ಯು ಟಿ ಖಾದರ್

Spread the love

ದ್ವೇಷ ಭಾವನೆ ಮೂಡಿಸುವ ಬ್ಯಾನರ್ ಅಳವಡಿಸುವವರ ವಿರುದ್ದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ – ಯು ಟಿ ಖಾದರ್

ಮಂಗಳೂರು: ದ್ವೇಷ ಭಾವನೆ ಮೂಡಿಸುವ ಬ್ಯಾನರ್ ಅಳವಡಿಸು ಕೊಳ್ಳುವವರು ಮತ್ತು ರಚಿಸುವವರ ವಿರುದ್ಧ ಸ್ವಯಂ ಪ್ರೇರಿತರಾಗಿ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಶಾಸಕ ಯು.ಟಿ.ಖಾ ದರ್ ಸುದ್ದಿ ಗೋಷ್ಠಿಯಲ್ಲಿಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ನಡುವೆ ದ್ವೇಷ ಹುಟ್ಟಿಸುವ ಬ್ಯಾನರ್ ಅಳವಡಿಸುವ ಕೆಲಸ ಕಿಡಿಗೇಡಿಗಳು ನಡೆಸುತ್ತಿದ್ದಾರೆ. ಇತ್ತೀಚೆಗೆ ಉಳ್ಳಾಲ ಬೈಲು ಪ್ರದೇಶದಲ್ಲಿ ಕೆಲವರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ಬ್ಯಾನರ್ ಅಳವಡಿಸಿದ್ದರು ಆದರೆ ಪೊಲೀಸರು ತಕ್ಷಣ ಗಮನಿಸಿ ಬ್ಯಾನರ್ ತೆರವುಗೊಳಿಸಿದ್ದಾರೆ. ಅದೇ ರೀತಿಯ ಪ್ರಕರಣಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಪತ್ತೆ ಹಚ್ಚಿದಾಗ ಮಾತ್ರ ಸಮಾಜದಲ್ಲಿ ಈ ರೀತಿಯ ಕಿಡಿಗೇಡಿ ಕೃತ್ಯಗಳು ಕಡಿಮೆಯಾಗುತ್ತದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಉಳ್ಳಾಲದಲ್ಲಿ ಜ.26ರಂದು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಭಿಮಾನಿ ವೇದಿಕೆಯ ಮೂಲಕ ಕೊಲ್ಯದಿಂದ ಉಳ್ಳಾಲ ವ್ಯಾಪ್ತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಯೊಂದಿಗೆ ಮೆರವಣಿಗೆ ನಡೆಯಲಿದೆ. ಗಣರಾಜ್ಯೋತ್ಸವದ ಪರೇಡ್ ಗೆ ಕೇರಳ ಸರಕಾರದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ವನ್ನು ನಿರಾಕರಿಸಿ ಅಲ್ಲಿ ನಾರಾ ಯಣಗುರುಗಳ ಪ್ರತಿಮೆಯ ಬದಲು ಆದಿ ಶಂಕರಾಚಾರ್ಯರ ಪ್ರತಿಮೆ ಸ್ಥಾಪಿಸಲು ಸೂಚನೆ ಏಕೆ ನೀಡಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಂದ್ರ ಸರಕಾರ ಸಮರ್ಪಕ ಉತ್ತರ ನೀಡಿಲ್ಲ. ಈ ರೀತಿಯ ನಿರ್ಧಾರ ನಾರಾಯಣ ಗುರುಗಳು. ಸಿದ್ದಾಂತಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ನಾಟೆಕಲ್ -ಕುತ್ತಾರ್ ಪ್ರದೇಶದಲ್ಲಿಹೈಟೆಕ್ ನಾಲೇಜ್ ಸಿಟಿಯಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆ ಗಳು , ಇನ್ಫೋಸಿಸ್ ಸಹಯೋಗದೊಂದಿಗೆ ಅಭಿ ವೃದ್ಧಿ ಯೋಜನೆ ರೂಪಿಸಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.

ಕುತ್ತಾರ್ ನಿಂದ ನಾಟೇಕಲ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶೇ 60ರಷ್ಟು ಪೂರ್ಣ ಗೊಂಡಿದೆ. ದೇರಳಕಟ್ಟೆ, ನಾಟೆಕಲ್ ಜಂಕ್ಷನ್ ಸೇರಿದಂತೆ ವಿವಿಧ ವೃತ್ತಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾದ ಸುರೇಶ್ ಭಟ್ನಗರ,ಮುಹಮ್ಮದ್ ಮೋನು ಮೊದಲಾದವರು ಉಪಸ್ಥಿತರಿದ್ದರು.


Spread the love