
ದ್ವೇಷ ರಾಜಕಾರಣ ಶೀಘ್ರದಲ್ಲೇ ಅಂತ್ಯವಾಗಲಿದೆ – ಕೆ. ಗೋಪಾಲ ಪೂಜಾರಿ
- ಕೊಲ್ಲೂರಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ
ಕುಂದಾಪುರ: ದ್ವೇಷ ರಾಜಕಾರಣವನ್ನು ಸುಸಂಸ್ಕೃತ ಸಮಾಜ ಎಂದಿಗೂ ಒಪ್ಪೋದಿಲ್ಲ. ಬೈಂದೂರಿನಲ್ಲಿ ನಡೆಯುತ್ತಿರುವ ದ್ವೇಷ ರಾಜಕಾರಣ ಶೀಘ್ರದಲ್ಲೇ ಅಂತ್ಯವಾಗಲಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ರಕ್ಷಣೆಯ ಹೊಣೆ ನಮ್ಮ ಕರ್ತವ್ಯವಾಗಿದೆ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಕೊಲ್ಲೂರಿನ ಎಎನ್ಆರ್ ಸಭಾಭವನದಲ್ಲಿ ನಡೆದ ಕೊಲ್ಲೂರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ದ್ವೇಷ ರಾಜಕಾರಣಕ್ಕೆ ಮಣೆ ಹಾಕದೆ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರೇ ನನ್ನ ಆಸ್ತಿ. 4 ಅವಧಿಯಲ್ಲಿ ಶಾಸಕನಾಗಲು ಆಶೀರ್ವಾದ ಮಾಡಿರುವ ಕ್ಷೇತ್ರದ ಜನರ ಋಣ ನನ್ನ ಮೇಲಿದೆ, ಅವರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ!
ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಜನರು ಆಶೀರ್ವಾದ ಮಾಡಿದ ಅವಧಿಯನ್ನು ಪ್ರಾಮಾಣಿಕ ಜನ ಸೇವೆಗೆ ಸದುಪಯೋಗ ಮಾಡಿಕೊಳ್ಳುವವರೆ ನಿಜವಾದ ಜನನಾಯಕರಾಗುತ್ತಾರೆ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಕೆ. ರಮೇಶ್ ಗಾಣಿಗ ಕೊಲ್ಲೂರು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಹರೀಶ್ ತೋಳಾರ್ ಕೊಲ್ಲೂರು, ಬೈಂದೂರು ನಗರ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗಾಣಿಗ ಬಂಕೇಶ್ವರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಗ್ರೀಷ್ಮಾ ಗಿರಿಧರ್ ಭಿಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ , ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪ , ಹೇಮಾ, ಸಹಕಾರಿ ಬ್ಯಾಂಕ್ ನಿರ್ದೇಶಕ ಚಂದ್ರ ಅಡಿಗ, ಪ್ರಮುಖರಾದ ವಾಸು ಹೆಗ್ಗಡೆ ಹಕ್ಲು , ಲಕ್ಷ್ಮೀಕಾಂತ ಕೊಲ್ಲೂರು, ನಾರಾಯಣ ಕಲ್ಯಾಣಿಗುಡ್ಡೆ, ಹರೀಶ್ ಸಿ.ವಿ, ಸುರೇಶ್ ಕಲ್ಯಾಣಿಗುಡ್ಡೆ ಇದ್ದರು.
ಚಂದ್ರ ಬಳೇಗಾರ್ ಸ್ವಾಗತಿಸಿದರು, ರಂಗ ನಾಯ್ಕ್ ನಿರೂಪಿಸಿದರು, ಅರುಣ್ ಕುಮಾರ್ ಶೆಟ್ಟಿ ವಂದಿಸಿದರು.