
Spread the love
ದ.ಕ. ಇಂಟಕ್ ಜಿಲ್ಲಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ನೇಮಕ
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗದ ಅಧ್ಯಕ್ಷ ಡಾ.ಜಿ. ಸಂಜೀವ್ ರೆಡ್ಡಿ ಅವರ ಆದೇಶ ಮೇರೆಗೆ, ರಾಷ್ಟ್ರೀಯ ಇಂಟಕ್ ವರಿಷ್ಠ ಎನ್.ಎಂ. ಅಡ್ಯಂತಾಯ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನುಮೋದನೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರ ಅನುಮತಿ ಮೇರೆಗೆ ದ.ಕ. ಜಿಲ್ಲಾ ಇಂಟಕ್ ವಿಭಾಗದ ಜಿಲ್ಲಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ.
ಚಿತ್ತರಂಜನ್ ಶೆಟ್ಟಿ ಅವರು ಈ ಹಿಂದೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ, ಜಿಲ್ಲಾ ಸೇವಾದಳದ ಕಾರ್ಯದರ್ಶಿ, ಬಂಟ್ವಾಳ ಇಂಟಕ್ ಕಾರ್ಯದರ್ಶಿ, ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಸಂಯೋಕರಾಗಿ ಸೇವೆ ಸಲ್ಲಿಸಿದ್ದಾರೆ.
Spread the love