ದ.ಕ.ಜಿಲ್ಲಾದ್ಯಂತ ಮತ್ತೆ ಎರಡು ದಿನ ರಾತ್ರಿ ನಿಷೇಧಾಜ್ಞೆ‌  ವಿಸ್ತರಣೆ

Spread the love

 ದ.ಕ.ಜಿಲ್ಲಾದ್ಯಂತ ಮತ್ತೆ ಎರಡು ದಿನ ರಾತ್ರಿ ನಿಷೇಧಾಜ್ಞೆ‌  ವಿಸ್ತರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳನ್ನು ಎರಡು ದಿನಗಳ ಕಾಲ ವಿಸ್ತರಿಸಿ ಜಿಲ್ಲಾಡಳಿತ ಭಾನುವಾರ ಆದೇಶ ಹೊರಡಿಸಿದೆ.

ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಜುಲೈ 29 ರಂದು ಫಾಝಿಲ್ ಹತ್ಯೆಯ ಹಿನ್ನೆಲೆಯಲ್ಲಿ, ಆಗಸ್ಟ್ 1 ರವರೆಗೆ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿತ್ತು.

ಮಂಗಳೂರು ನಗರ ಪೊಲೀಸ್ ಮತ್ತು ಜಿಲ್ಲಾ ಪೊಲೀಸರ ಮನವಿಯಂತೆ ಈ ನಿರ್ಬಂಧವನ್ನು ವಿಸ್ತರಿಸಲಾಗಿದೆ. ನಿರ್ಬಂಧದ ವೇಳೆ ಆಸ್ಪತ್ರೆ, ಔಷಧಿ ಅಂಗಡಿ ಮತ್ತಿತರ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ, ವಾಣಿಜ್ಯ ಸಂಕೀರ್ಣಗಳನ್ನು ಮುಚ್ಚಬೇಕು. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಲು ಮಾತ್ರ ಬಸ್, ಆಟೋರಿಕ್ಷಾ ಮತ್ತು ಟ್ಯಾಕ್ಸಿ ಸಂಚಾರಕ್ಕೆ ಅವಕಾಶವಿದೆ. ಅವಶ್ಯಕ ವಸ್ತುಗಳ ಸಾಗಾಣಿಕೆಗೆ ವಾಹನಗಳನ್ನು ಬಳಸಬಹುದಾಗಿದೆ. ಆದರೆ ಯಾವುದೇ ಅನಗತ್ಯ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಆ.6ರವರೆಗೆ ನಿಷೇಧಾಜ್ಞೆ

ಸೆಕ್ಷನ್ 144ರ ಅನ್ವಯ ಜಿಲ್ಲಾದ್ಯಂತ ಆ.6ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಮದ್ಯ ಮಾರಾಟವನ್ನು ಕೂಡ ಆ.3 ರವರೆಗೆ ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here