ದ.ಕ. ಜಿಲ್ಲಾ ಇಂಟಕ್ ಸಮಿತಿ ಕಾರ್ಯಾಕಾರಿಣಿ ಸಭೆ

Spread the love

ದ.ಕ. ಜಿಲ್ಲಾ ಇಂಟಕ್ ಸಮಿತಿ ಕಾರ್ಯಾಕಾರಿಣಿ ಸಭೆ

ಮಂಗಳೂರು: ದ.ಕ. ಜಿಲ್ಲಾ ಇಂಟಕ್ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಾಕಾರಿಣಿ ಸಭೆ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಇಂಟಕ್ ಸಮಿತಿಯ ಕಾರ್ಯದರ್ಶಿ ರಾಕೇಶ್ ಮಲ್ಲಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಾರ್ಡ್ ಮೂಲಕ ಸಿಗುವ ಎಲ್ಲಾ ಸವಲತ್ತುಗಳನ್ನು ಜಿಲ್ಲೆಯ ಕಾರ್ಮಿಕರಿಗೆ ಸಿಗುವಲ್ಲಿ ಇಂಟಕ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇಂಟಕ್ ನಿಂದ ಜು.10ರಿಂದ ಸೆ.10ರ ವರೆಗೆ ಜಿಲ್ಲೆಯಲ್ಲಿ ಕಾರ್ಮಿಕ ಕಾರ್ಡ್ ನೋಂದಾವಣಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಯಶಸ್ವಿಯಾಗಿ ನೆರವೇರಿಸುವಂತೆ ಹಾಗೂ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡುವಂತೆ ಎಂದು ಕರೆ ನೀಡಿದರು.

ಈ ವೇಳೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ದಿ.ರಾಮ್ ದಾಸ್ ಪ್ರಭು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ರಾಜ್ಯ ಇಂಟಕ್ ಉಪಾಧ್ಯಕ್ಷ ಸಿ.ಕೆ. ರೆಹಮಾನ್, ಜಿಲ್ಲಾ ಇಂಟಕ್ ಉಪಾಧ್ಯಕ್ಷ ವಿಜಯ್, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಕಲ್ಲಿಗೆ ತಾರನಾಥ್ ಶೆಟ್ಟಿ, ನವೀನ್ ಡಿಸೋಜಾ, ರಾಜ್ಯ ಯುವ ಇಂಟಕ್ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ, ಮಾಜಿ ಮೇಯರ್ ಮಹಾಬಲ ಮಾರ್ಲ, ಜಿಲ್ಲಾ ಯುವ ಇಂಟಕ್ ಅಧ್ಯಕ್ಷ ಚಿರಂಜೀವಿ ಅಂಚನ್, ಇಂಟಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಜಿಲ್ಲಾ ಯುವ ಇಂಟಕ್ ಕಾರ್ಯಾಧ್ಯಕ್ಷ ಶಿಪಲ್ ರಾಜ್ ಡಿ.ಎ, ಜಿಲ್ಲಾ ಯುವ ಇಂಟಕ್ ಉಪಾಧ್ಯಕ್ಷ ವಿಶಾಲ್ ಪೂಜಾರಿ, ಮಂಗಳೂರು ದಕ್ಷಿಣ ಯುವ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


Spread the love