ದ.ಕ.ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ  ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಅವರ ಜನ್ಮದಿನೋತ್ಸವ

Spread the love

ದ.ಕ.ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ  ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಅವರ ಜನ್ಮದಿನೋತ್ಸವ

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಜಂಟಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಜನ್ಮದಿನೋತ್ಸವ ಆಚರಣೆ ಶುಕ್ರವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಮಗ ರಾಜೀವ್ ಗಾಂಧಿ ಪೈಲಟ್ ಆಗುವ ಕನಸು ಕಂಡವರು. ನಂತರ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸುವ ಪರಿಸ್ಥಿತಿ ಎದುರಾಯಿತು. ಅವರು ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಪ್ರಧಾನಿಯಾದ ಬಳಿಕ ರಾಜೀವ್ ಗಾಂಧಿ ಅವರು ನಾಜೂಕಾಗಿ ಅಧಿಕಾರವನ್ನು ನಡೆಸಿದರು. ಮಹಿಳೆಯರು, ಯುವಕರಿಗೆ ಪ್ರಾಧಾನ್ಯತೆ ನೀಡಿದ್ದಾರೆ. ಕೃಷಿಗೆ, ಕೈಗಾರೀಕರಣಕ್ಕೆ ಉತ್ತೇಜನ ನೀಡಿದಷ್ಟೇ ದೇಶದ ಅಭಿವೃದ್ಧಿಗೆ ಶ್ರಮವಹಿಸಿದ್ದರು. ದೇವರಾಜ್ ಅರಸು ಅವರು ಬಡ ಜನರ ದೀನ ದಲಿತರರಿಗೆ, ಹಿಂದುಳಿದ ವರ್ಗದವರಿಗೆ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಮೇಲೆತ್ತಿದವರು ಎಂದು ಸ್ಮರಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜಾರಿ ಮಾಡಿ ಹಿಂದುಳಿದ, ಅಶಕ್ತರು, ದಲಿತರು ಹಾಗೂ ದುರ್ಬಲ ವರ್ಗದವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದ ಕೀರ್ತಿ ರಾಜೀವ್ ಗಾಂಧಿಗೆ ಸಲ್ಲುತ್ತದೆ. ಇಂದಿರಾ ಗಾಂಧಿಯವರ ಉಳುವವನೇ ಹೊಲದೊಡೆಯ ಕನಸನ್ನು ಯತಾವತ್ತಾಗಿ ರಾಜ್ಯದಲ್ಲಿ ಜಾರಿಗೊಳಿಸಿ ಬಡವರಿಗೆ ಭೂಮಿಯನ್ನು ಹಂಚಿದ ದೇವರಾಜು ಅರಸು ಕ್ರಾಂತಿಕಾರಿ ಮುಖ್ಯಮಂತ್ರಿ ಎಂದು ಹೇಳಿದರು.

ದೇಶಕ್ಕಾಗಿ ಹುತಾತ್ಮರಾದವರನ್ನು ಟೀಕೆ ಮಾಡುವವರು ದೇಶದ್ರೋಹಿಗಳು. ಸಮಾಜಕ್ಕೆ ನ್ಯಾಯಕೊಟ್ಟ ಪಕ್ಷ ಇದ್ದರೆ ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ದುರ್ಬಲ ವರ್ಗದವರಿಗೆ ಸಾಕಷ್ಟು ಅವಕಾಶ ನೀಡಿದೆ. ಆದರೆ, ಬಿಜೆಪಿ ಅವರನ್ನು ವಂಚಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಮೊಯ್ದೀನ್ ಬಾವಾ, ಎಐಸಿಸಿ ಕಾರ್ಯದರ್ಶಿ ಐವನ್ ಪಿ.ವಿ. ಮೋಹನ್ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, ಮಾಜಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಡಿಸಿಸಿ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್, ಶಾಲೆಟ್ ಪಿಂಟೊ, ಶುಭೋದಯ ಆಳ್ವ, ಶಾಹುಲ್ ಹಮೀದ್, ಜೋಕ್ಕಿಂ ಡಿಸೋಜಾ, ಸವಾದ್ ಸುಳ್ಯ, ಪ್ರಕಾಶ್ ಸಾಲ್ಯಾನ್, ನವೀನ್ ಡಿಸೋಜಾ, ಗಣೇಶ್ ಪೂಜಾರಿ, ನೀರಜ್ ಚಂದ್ರ ಪಾಲ್, ಮಹಾಬಲ ಮಾರ್ಲ, ವಿವೇಕ್ ರಾಜ್ ಪೂಜಾರಿ, ಟಿ.ಕೆ.ಸುಧೀರ್, ಕು.ಅಪ್ಪಿ, ಪುರುಷೋತ್ತಮ ಚಿತ್ರಾಪುರ, ಸಿ.ಎಂ.ಮುಸ್ತಫಾ, ಪ್ರೇಮ್ ಬಳ್ಳಾಲ್ ಭಾಗ್, ದೀಪಕ್ ಪೂಜಾರಿ, ಪದ್ಮನಾಭ ಅಮೀನ್, ಶಬ್ಬೀರ್.ಎಸ್, ಚೇತನ್ ಬೆಂಗ್ರೆ, ಟಿ.ಕೆ.ಸೈಲಜಾ, ಫಾರೂಕ್ ಬಯಾಬೆ, ಆಲ್ವಿನ್ ಪ್ರಕಾಶ್ ಸಿಕ್ವೇರಾ, ದಿನೇಶ್ ಕುಂಪಲ, ಸಂಶುದ್ದೀನ್ ಬಂದರ್, ಮಲ್ಲಿಕಾ ಪಕ್ಕಲ, ಯೋಗೀಶ್ ಕುಮಾರ್, ಎನ್.ಪಿ ಮನುರಾಜ್, ರಮಾನಂದ ಪೂಜಾರಿ, ಎಸ್.ಕೆ.ಸೌಹಾನ್, ಶೋಭಾ ಪಡೀಲ್, ಭುವನ್ ಕರ್ಕೇರ, ಸಿದ್ದೀಕ್ ಪಾರೆ, ಫಯಾಝ್ ಅಮ್ಮೆಮ್ಮಾರ್, ಮಹಮ್ಮದ್ ಹನೀಫ್ ಬಜಾಲ್, ಮಿಥುನ್ ಕುಮಾರ್, ಶರೀಫ್ ವಳಾಲ್, ಮಹಮ್ಮದ್ ಬಪ್ಪಳಿಗೆ, ಟಿ.ಹೊನ್ನಯ್ಯ, ಅಶೋಕ್, ಜೀತೇಂದ್ರ ಸುವರ್ಣ, ಹರೀಶ್ ಶೆಟ್ಟಿ, ಗೀತಾ ಪ್ರವೀಣ್, ಮಲ್ಲಿಕಾರ್ಜುನ ಕೋಡಿಕಲ್, ಜಾರ್ಜ್, ಇಸ್ಮಾಯೀಲ್ ಬಿ.ಎಸ್, ಯಶವಂತ್ ಪ್ರಭು, ಸಬಿತಾ ಮಿಸ್ಕಿತ್, ಹೈದರ್ ಎಮ್ಮೆಕರೆ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ವಿಶ್ವಾಸ್ ದಾಸ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Spread the love