ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ

Spread the love

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಿ ಐಕ್ಯತೆಗಾಗಿ ಅಸಂಖ್ಯಾತ ಹೋರಾಟಗಾರರು ತ್ಯಾಗ, ಬಲಿದಾನ ನೀಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸರ್ವಾಧಿಕಾರದಿಂದ ದೇಶ ಸ್ವತಂತ್ರವಾಗಿ ಜನರು ಸಾಮರಸ್ಯದಿಂದ ಬದುಕಬೇಕೆನ್ನುವ ಉದ್ದೇಶದಿಂದ ಮಹಾತ್ಮ ಗಾಂಧಿ, ಪಂಡಿತ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಶ್ ಚಂದ್ರ ಬೋಸ್, ಮೌಲಾನ ಆಝಾದ್ ಸೇರಿದಂತೆ ಹಲವಾರು ನಾಯಕರುಗಳು ಸೇರಿ ಎಲ್ಲರನ್ನು ಒಗ್ಗೂಡಿಸಿ ಹೋರಾಡಿದ ಫಲವಾಗಿ ಸ್ವಾತಂತ್ರ್ಯ ಲಭಿಸಿತು ಎಂದು ಹೇಳಿದರು.

ಇಂದು ಸಮಾಜದಲ್ಲಿ ವಿಚಿತ್ರಕಾರಿ ಶಕ್ತಿಗಳು ಸಾಮರಸ್ಯವನ್ನು ಕದಡುವ ಮೂಲಕ ದ್ವೇಷವನ್ನು ಹರಡಿ ರಾಜಕೀಯ ಶಕ್ತಿ ಪಡೆದು ಅಧಿಕಾರ ಪಡೆಯಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ಶಕ್ತಿ ಪ್ರಜಾಪ್ರಭುತ್ವದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಪತ್ರಿಕಾ ರಂಗವನ್ನು ಹತೋಟಿಗೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ. ಇದು ದೇಶದ ಭವಿಷ್ಯಕ್ಕೆ ಗಂಡಾತರವಾಗಿದ್ದು, ಇದರ ವಿರುದ್ಧ ಸಂಘಟಿತರಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮುಖಂಡರಾದ ಸುರೇಶ್ ಬಳ್ಳಾಲ್, ಡಾ.ಬಿ.ಜಿ.ಸುವರ್ಣ, ಶಾಹುಲ್ ಹಮೀದ್, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಮನೋರಾಜ್ ರಾಜೀವ, ಲಾರೆನ್ಸ್ ಡಿಸೋಜ, ನವೀನ್ ಡಿಸೋಜಾ, ಎ.ಸಿ.ವಿನಯ್ ರಾಜ್, ಸುರೇಂದ್ರ ಕಾಂಬ್ಳಿ, ಜೆ.ಅಬ್ದುಲ್ ಸಲೀಂ, ಕೆ.ಹರಿನಾಥ್, ಎಸ್.ಅಪ್ಪಿ, ಸದಾಶಿವ ಶೆಟ್ಟಿ ಸುರತ್ಕಲ್, ಮೊಹಮ್ಮದ್ ಕುಂಜತ್ತಬೈಲ್, ಪದ್ಮನಾಭ ಅಮೀನ್, ವಿಶ್ವನಾಥ್ ಬಜಾಲ್, ಸಂತೋಷ್ ಕುಮಾರ್ ಶೆಟ್ಟಿ, ಚೇತನ್ ಬೆಂಗ್ರೆ, ಶುಭೋದಯ ಆಳ್ವ, ಟಿ.ಹೊನ್ನಯ್ಯ, ಉಳ್ಳಾಸ್ ಕೋಟ್ಯಾನ್, ನೀರಜ್ ಚಂದ್ರಪಾಲ್, ಶಬ್ಬೀರ್.ಎಸ್, ನಝೀರ್ ಬಜಾಲ್, ಟಿ.ಕೆ.ಸುಧೀರ್, ವಿಕಾಸ್ ಶೆಟ್ಟಿ, ಅಲಿಸ್ಟರ್, ಆರಿಫ್ ಬಂದರ್, ಝೀನತ್ ಸಂಶುದ್ದೀನ್ ಬಂದರ್, ಜೆಸಿಂತಾ ಆಲ್ಫ್ರೆಡ್, ಕವಿತಾ ಸನಿಲ್, ಸಬಿತಾ ಮಿಸ್ಕಿತ್, ಮಲ್ಲಿಕಾ ಪಕಳ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕ್ಕಿಂ ಡಿಸೋಜ ಧ್ವಜ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದರು.


Spread the love