ದ. ಕ ಜಿಲ್ಲೆಯ ಸಂಸದ ಹಾಗೂ ಉಸ್ತುವಾರಿ ಸಚಿವರೊಡನೆ ಹೊಂದಾಣಿಕೆ ಇಲ್ಲ: ಸುಶೀಲ್ ನೊರೊನ್ಹಾ

Spread the love

ದ. ಕ ಜಿಲ್ಲೆಯ ಸಂಸದ ಹಾಗೂ ಉಸ್ತುವಾರಿ ಸಚಿವರೊಡನೆ ಹೊಂದಾಣಿಕೆ ಇಲ್ಲ: ಸುಶೀಲ್ ನೊರೊನ್ಹಾ

ಸುರತ್ಕಲ್ ಟೋಲ್ ಗೇಟ್ ರದ್ದತಿ ಬಗ್ಗೆ ಬಹಳ ಅನುಮಾನ ಸ್ವಷ್ಟವಾಗಿ ಎದ್ದು ಕಾಣುತ್ತದೆ. ಲೋಕಸಭೆಯ ಮೂರು ಸಾರಿ ಸಂಸದರಾಗಿ 15 ದಿನದಲ್ಲಿ ಟೋಲ್ ಗೇಟ್ ರದ್ದು ಮಾಡುತೇವೆ ಹೇಳಿಕೆ ಕೊಟ್ಟು 4 ದಿನಗಳ ನಂತರ ಜಿಲ್ಲೆಯ ಉಸ್ತುವಾರಿ ಸಚಿವರು ಈ ತಿಂಗಳ ಕೊನೆಯಲ್ಲಿ ರದ್ದು ಆಗುತ್ತದೆ ಎಂದು ಹೇಳಿಕೆ ಇಬ್ಬರ ನಡುವೆ ತಾನು ಮೇಲೂ ನೀನು ಮೇಲೊ ಎಂಬ ಮುಸುಕಿನ ಗುದಾಟವೇ . ಅಥವಾ ಇನ್ನೂ ಮುಖ್ಯಮಂತ್ರಿಗಳ ಹೇಳಿಕೆ, ಕೇಂದ್ರ ಸಚಿವ ಗಡ್ಕರಿ ನೀಡಿ ಜನರನ್ನು ಮೋಸ ಮಾಡುವ ಹುನ್ನಾರ ನಡೆಯುವ ಸ್ವಷ್ಟ ಲಕ್ಷಣ ಎದ್ದು ಕಾಣುತ್ತದೆ. 6 ವರುಷಗಳಿಂದ ಮೋಸ ಮಾಡಿ ಇನ್ನು ಕೂಡ ಜನರನ್ನು ಸತಾಯಿಸುವುದು. ತಮ್ಮ ದುರಾಂಹಕಾರದ ಪರಮಾವಧಿ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದಾರೆ.


Spread the love