ದ.ಕ.ಜಿಲ್ಲೆಯ 11 ಮಂದಿಗೆ ಗಡಿಪಾರಿಗೆ ದ.ಕ. ಜಿಲ್ಲಾಧಿಕಾರಿ ಆದೇಶ

Spread the love

ದ.ಕ.ಜಿಲ್ಲೆಯ 11 ಮಂದಿಗೆ ಗಡಿಪಾರಿಗೆ ದ.ಕ. ಜಿಲ್ಲಾಧಿಕಾರಿ ಆದೇಶ

ಮಂಗಳೂರು: ದ.ಕ.ಜಿಲ್ಲೆಯ 6 ಪೊಲೀಸ್ ಠಾಣಾ ವ್ಯಾಪ್ತಿಯ 11 ಮಂದಿಗೆ 6 ತಿಂಗಳ ಕಾಲ ಗಡಿಪಾರುಗೊಳಿಸಿ ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ.

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಗೋಳ್ತಮಜಲು ಗ್ರಾಮದ ನಝೀರ್ ಕುಣಿಗಲ್, ಬಾಳ್ತಿಲ ಗ್ರಾಮದ ಇಬ್ರಾಹೀಂ ಖಲೀಲ್, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗನ್ನೂರು ಗ್ರಾಮದ ಜಯರಾಜ್ ರೈ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕಬಕ ಗ್ರಾಮದ ನೆಹರೂ ನಗರದ ಇಬ್ರಾಹೀಂ, ಕೆಮ್ಮಿಂಜೆ ಗ್ರಾಮದ ಹಕೀಂ ಕೂರ್ನಡ್ಕ, ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ಮಾರು ಗ್ರಾಮದ ರೋಶನ್, ಸವಣೂರು ಗ್ರಾಮದ ಪ್ರಸಾದ್, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಅಬೂಬಕರ್ ಸಿದ್ದೀಕ್ ಯಾನೆ ಜೆಸಿಬಿ ಸಿದ್ದೀಕ್, ಉಪ್ಪಿನಂಗಡಿ ಗ್ರಾಮದ ಉಮೈದ್ ಬಿ.ಎಸ್., ತಸ್ಲೀಂ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಶಿಲ ಗ್ರಾಮದ ಕಿರಣ್ ಕುಮಾರ್ ಡಿ. ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿದೆ.

ದ.ಕ.ಜಿಲ್ಲಾ ಎಸ್ಪಿಯ ವರದಿಯ ಆಧಾರದ ಮೇಲೆ ಮಾ.6ರಿಂದ ಸೆಪ್ಟಂಬರ್ 6ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.


Spread the love

Leave a Reply

Please enter your comment!
Please enter your name here