ದ. ಕ.ದವರು ಬ್ಯಾಂಕ್ ಕಟ್ಟಿದರು, ಗುಜರಾತಿಗಳು ನುಂಗಿ ನೀರು ಕುಡಿದರು: ಸಿದ್ದರಾಮಯ್ಯ ವಾಗ್ದಾಳಿ

Spread the love

ದ. ಕ.ದವರು ಬ್ಯಾಂಕ್ ಕಟ್ಟಿದರು, ಗುಜರಾತಿಗಳು ನುಂಗಿ ನೀರು ಕುಡಿದರು: ಸಿದ್ದರಾಮಯ್ಯ ವಾಗ್ದಾಳಿ
 

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿಧಾನಸಭೆ ವಿ‍ಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪುತ್ತೂರಿನಲ್ಲಿ ಶನಿವಾರ ನಡೆದ ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರುಕಟ್ಟೆ ಮತ್ತು ಸಂಸ್ಕರಣೆ ಸಹಕಾರಿ ಸಂಸ್ಥೆ ‘ಕ್ಯಾಂಪ್ಕೊ’ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ, ‘ಗುಜರಾತ್‌ ಜನರು ಅಡಿಕೆ ತಿಂದರೆ, ದಕ್ಷಿಣ ಕನ್ನಡದ ಜನ ಅಡಿಕೆ ಬೆಳೆಯುತ್ತಾರೆ’ ಎಂದು ಹೇಳಿದ್ದರು.

ಅಮಿತ್ ಶಾ ಅವರು ಹೇಳಿಕೆ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ದಕ್ಷಿಣ ಕನ್ನಡದವರು ವಿಜಯ ಬ್ಯಾಂಕ್‌, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಕಟ್ಟಿ ಬೆಳೆಸಿದರು. ಗುಜರಾತ್‌ನವರು ಈ ಬ್ಯಾಂಕ್‌ಗಳನ್ನು ನುಂಗಿ ನೀರು ಕುಡಿದರು. ನಮ್ಮವರಿಗೆ ಕಟ್ಟುವುದು, ಬೆಳೆಸುವುದು ಗೊತ್ತು, ನಿಮಗೆ ಮಾರುವುದು, ಮುಳುಗಿಸುವುದು ಮಾತ್ರ ಗೊತ್ತು’ ಎಂದು ಟ್ವೀಟ್ ಮಾಡಿದ್ದಾರೆ.


Spread the love