ದ ಕ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಆದೇಶ – ಚಿನ್ನಿ ರಮೇಶ್ ದೋಷ ಮುಕ್ತ

Spread the love

ದ ಕ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಆದೇಶ – ಚಿನ್ನಿ ರಮೇಶ್ ದೋಷ ಮುಕ್ತ

ದಿನಾಂಕ 9-11-2013 ರಂದು ಬೆಳಗಿನ ಜಾವ 2 ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ಎಂಬಲ್ಲಿ ರಾಮಚಂದ್ರ ಭಟ್ ಎಂಬವರ ಮನೆ ಅಂಗಳಕ್ಕೆ ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಚಿನ್ನಿ ರಮೇಶ್ ಅಲಿಯಾಸ್ ರಮೇಶ್ ಅಲಿಯಾಸ್ ಶಿವಕುಮಾರ್ ಈತನು ರೋಪಿಗಳಾದ 1. ವಿಕ್ರಂ ಗೌಡ 2. ಸಾವಿತ್ರಿ. 3. ಸುಂದರಿ 4. ವಿಜಯ್ 5. ಜಯಣ್ಣ ಮತ್ತು ಇತರರೊಂದಿಗೆ ಸೇರಿಕೊಂಡು ಪ್ರವೇಶ ಮಾಡಿ ದೂರುದಾರ ರಾಮಚಂದ್ರ ಭಟ್ ಇವರ ಮನೆಯ ಬಾಗಿಲನ್ನು ಬಡಿದು ಹೊರಗೆ ಕರೆದರು.

ಅವರು ಮನೆಯಿಂದ ಹೊರಗಡೆ ಬಾರದೆ ಇದ್ದಾಗ ಅವರ ಮನೆಯ ಅಂಗಳದಲ್ಲಿ ಇದ್ದ KA 18 V 5816 ಮೋಟಾರು ಸೈಕಲ್ ಮತ್ತು KA 21 N ಮಾರುತಿ OMNI ಕಾರಿಗೆ ಬೆಂಕಿ ಹಚ್ಚಿ ಸುತ್ತು ಹಾಕಿದ್ದಾರೆ ಮತ್ತು ಆ ಮೂಲಕ ದೂರುದಾರರಿಗೆ ಸುಮಾರು 2,69,555/ರಷ್ಟು ನಷ್ಟ ಉಂಟಾಗಿರುತ್ತದೆ ಎಂದು ದಿಶಾರೋಪಣಾ ಪಟ್ಟಿಯನ್ನು ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಷರ ನ್ಯಾಯಾಯಾಲಯದಲ್ಲಿ ಸಲ್ಲಿಸಲಾಗಿತ್ತು.

ಆರಂಭಿಕವಾಗಿ ತನಿಖೆಯನ್ನು ಮಾಡಿರುವ ಬಂಟ್ವಾಳ DYSP ಯಾದ ರವೀಶ್ ಕ್ರಿಕೆಟ್ ಇವರುಗಳು ಆರೋಪಿಗಳನ್ನು ಪತ್ತೆ ಮಾಡುವ ಸಾಧ್ಯತೆ ಕಡಿಮೆ ಇರುವುದರಿಂದ ಇದೊಂದು ಪತ್ತೆ ಯಾಗದ ಪ್ರಕಾರಣವೆಂದು ಪರಿಗಣಿಸಿ C ಅಂತಿಮ ವರದಿಯನ್ನು ದಿನಾಂಕ 17-01-2017 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆ ಬಳಿಕ ಉಡುಪಿಯಲ್ಲಿ SP ಯಾಗಿದ್ದ ಪ್ರಸ್ತುತ ರಾಜಕಾರಣಿಯಗಿರುವ ಅಣ್ಣಾಮಲೈ ರವರು ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂದಿತಾನಾಗಿದ್ದ ಚಿನ್ನಿ ರಮೇಶ್ ಎಂಬಾತನನ್ನು ವಶಕ್ಕೆ ಪಡೆದು ಈ ಪ್ರಕರಣದ ಆರೋಪಿತಂನೆಂದು ಗುರುತಿಸಿ ಈ ಪ್ರಕಾರಣವನ್ನು ಮರುತನಿಖೆ ಗೆ ಆದೇಶ ಮಾಡಲಾಯಿತು.

ಮರು ತನಿಖೆಯನ್ನು ಆರಂಭಿಸಿದ DYSP ರವೀಶ್ CR ಆರೋಪಿ ಚಿನ್ನಿ ರಮೇಶ್ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರೂಪಡಿಸಿ ಮೇಲಿಂನಂತೆ ಆರೋಪಪಟ್ಟಿಯನ್ನು ತಯಾರಿಸಿ ದಿನಾಂಕ 127-2017 ರಂದು ಸಲ್ಲಿಸಿದ್ದರು.

ವಿಚಾರಣೆ ಆರಂಭಿಸಿದ ಜಿಲ್ಲಾ ನ್ಯಾಯಾಲಯ ಆರೋಪ ಪಟ್ಟಿಯಲ್ಲಿದ್ದ ಒಟ್ಟು 22 ಸಾಕ್ಷಿಗಳಲ್ಲಿ 9 ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆ ಮಾಡಿತು. ಅದರಲ್ಲಿ 5 ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು.

2013 ರ ಸಮಯದಲ್ಲಿ ಕುತ್ ಲೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಸರಕಾರ ಒಕ್ಕಲು ಎಬ್ಬಿಸುತ್ತಿತ್ತು. ಈ ಸಂದರ್ಭ ದೂರುದಾರ ರಾಮಚಂದ್ರ ಭಟ್ ಅರನ್ಯವಾಸಿಗಳನ್ನು ಒಕ್ಕಲು ಎಬ್ಬಿಸುವ ಕೆಲಸ ಮಾಡುತ್ತಿದ್ದರು. ಈ ಹಿಂನ್ಮೇಲೆಯಲ್ಲಿ ನಕ್ಸಲರು ಈ ಕ್ರತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

 ದಿನಾಂಕ 10-10-2022 ರಂದು ನ್ಯಾಯಾಲಯ ಅಂತಿಮ ನಿರ್ಣಾಯವನ್ನು ಪ್ರಕಟಿಸಿ ಆರೋಪಿ ಚಿನ್ನಿ ರಮೇಶ್ ನನ್ನು ದೋಷ ಮುಕ್ತ ಗೊಳಿಸಿದೆ.

ಚಿನ್ನಿ ರಮೇಶ್ ವಿರುದ್ಧ ಚಿಕ್ಕ ಮಗಳೂರಿನಲ್ಲಿ 4 ಕೇಸ್ ಗಳು ವಿಚಾರಣೆಯಲ್ಲಿ ಇದ್ದು ಪ್ರಸ್ತುತ ಬೆಂಗಳೂರು ಜೈಲ್ ನಲ್ಲಿ ಇದ್ದಾನೆ. ದೂರುದಾರ ರಾಮಚಂದ್ರ ಭಟ್ ಆತನ ಪತ್ನಿ ಹಾಗೂ ಇತರ ಸಾಕ್ಷಿಗಳು prosecution ಪರವಾಗಿ ಸಾಕ್ಷ್ಯ ನೀಡಿದ್ದರು.


Spread the love