ಧರ್ಮದ ರಕ್ಷಣೆಗೆ ಹಿಂದೂ ಸಮಾಜ ಮೈಕೊಡವಿ ಎದ್ದು ನಿಲ್ಲಬೇಕು – ಜಗದೀಶ್ ಕಾರಂತ್

Spread the love

ಧರ್ಮದ ರಕ್ಷಣೆಗೆ ಹಿಂದೂ ಸಮಾಜ ಮೈಕೊಡವಿ ಎದ್ದು ನಿಲ್ಲಬೇಕು – ಜಗದೀಶ್ ಕಾರಂತ್

ಉಡುಪಿ: ಹಿಂದೂ ಜಾಗರಣ ವೇದಿಕೆಯಿಂದ ಶುಕ್ರವಾರ ಉಡುಪಿಯಲ್ಲಿ ಬೃಹತ್ ದುರ್ಗಾ ದೌಡ್ ನಡೆಯಿತು.ಸಾವಿರಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ವಿಜಯದಶಮಿಯ ಹಿನ್ನೆಲೆಯಲ್ಲಿ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಕಾರ್ಯಕರ್ತರು ತಲವಾರುಗಳನ್ನು ಪ್ರದರ್ಶಿಸಿದರು. ಹತ್ತಕ್ಕೂ ಹೆಚ್ಚು ಕಾರ್ಯಕರ್ತರಿಂದ ಆಯುಧ ಪ್ರದರ್ಶನ ನಡೆಯಿತು. ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ನಗರದ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದವರೆಗೆ ಸಾಗಿತು.

ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ದೇಶದಲ್ಲಿ ರಾಷ್ಟ್ರವಾದ ಬೆಳಗುತ್ತಿದ್ದು, ಜಾತ್ಯತೀತವಾದ, ಸಮಾಜವಾದ ಸಮಾಧಿಯಾಗಿದೆ. ಜನಬೆಂಬಲ ಕಳೆದುಕೊಂಡು ಹತಾಶರಾಗಿರುವವರು ರೈತರ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದ್ದಾರೆ. ಈ ಬಗ್ಗೆ ಹಿಂದು ಸಮಾಜ ಜಾಗೃತರಾಗಬೇಕು ಎಂದು ಹೇಳಿದರು.

ದೆಹಲಿಯಲ್ಲಿ ಗಣರಾಜ್ಯದಿನ ನಡೆದ ಗಲಭೆ ಷಡ್ಯಂತ್ರದ ಭಾಗವಾಗಿದೆ. ಸೋಲು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲದ ದೇಶದ ಒಳಗಿನ ಶತ್ರುಗಳು ಮತ್ತು ಹೊರಗಿನ ಶತ್ರುಗಳು ಇಸ್ಲಾಮಿಕ್ ಮತೀಯವಾದಿ ಶಕ್ತಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶತ್ರುಗಳ ಗುರಿ ಭಾರತವಾಗಿದೆ. ಜಾಗೃತ ಹಿಂದು ಸಮಾಜ ಇದಕ್ಕೆ ತಡೆಗೋಡೆಯಾಗಿ ನಿಲ್ಲಬೇಕು ಎಂದರು.

ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಭಾರತವನ್ನು ಇಸ್ಲಾಮೀಕರಣಗೊಳಿಸಲು ಸಂಚು ನಡೆಸುತ್ತಿವೆ. ಮುಸ್ಲಿಮರ ಜನಸಂಖ್ಯೆ ಶೇ.20ಕ್ಕಿಂತ ಹೆಚ್ಚು ಇರುವ ಕಡೆಗಳಲ್ಲಿ ಹಿಂದು ಸಮಾಜದ ಮೇಲೆ ದಾಳಿ ಆರಂಭವಾಗುತ್ತದೆ. ಮತಾಂಧತೆಯ ಹುಚ್ಚಾಟಕ್ಕೆ ಭಾರತದಲ್ಲಿ ಅವಕಾಶ ನೀಡಬಾರದು ಎಂದು ಹೇಳಿದರು.

ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅಧ್ಯಕ್ಷತೆ ವಹಿಸಿದ್ದರು. ಹಿಂಜಾವೇ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ರಾಜ್ಯ ಪ್ರಚಾರ ಪ್ರಮುಖ್ ಅರವಿಂದ ಕೋಟೇಶ್ವರ, ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು, ಪ್ರಾಂತ ಉಪಾಧ್ಯಕ್ಷ ಕಿಶೋರ್ ಮಂಗಳೂರು, ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ಚಿನ್ಮಯ್ ಈಶ್ವರಮಂಗಲ, ಪ್ರಕಾಶ್ ಕುಕ್ಕೇಹಳ್ಳಿ ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್, ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಭಾಗವಹಿಸಿದ್ದರು. 5 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.


Spread the love

1 Comment

  1. Udupi mutt nalli brahmanethatige ulidu kolloke room kodistira? Alli room beku andre naavu brahmanaru antha sullu heli room thagolbeku. Innu naavu kappagidre mugithu..modalu nammalliro jaathi vyavasthe thegiri..bere ellarigintha brahmanre shresta annodanna bidi. Namma halli galallu dalitharanna devasthanakke bidodilla…yaarige aagli swabhimanakke dhakke aadre thadkollodikke aagalla…nanondu brahmin friend maduve ge hogidde friend jothe. Navibru kappidivi aadre avrigintha clean idvi.Naavu Hindu gale..aadre naavu ootakke koothaga aa line nali allidda brahmanarella eddu bere kade koothru. Estu avamana. Hindugala shrestaru annorindane nammantha Hindu galige avamana…modalu idanna saripadi..amele dharma huliso bagge horaadona.

Comments are closed.