Home Mangalorean News Kannada News ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಭಜನೆಯಿಂದ ಆಧ್ಯಾತ್ಮಿಕ ಚೈತನ್ಯ ಜಾಗೃತಿ, ಪರಿಶುದ್ಧ ಜೀವನ

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಭಜನೆಯಿಂದ ಆಧ್ಯಾತ್ಮಿಕ ಚೈತನ್ಯ ಜಾಗೃತಿ, ಪರಿಶುದ್ಧ ಜೀವನ

Spread the love

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಭಜನೆಯಿಂದ ಆಧ್ಯಾತ್ಮಿಕ ಚೈತನ್ಯ ಜಾಗೃತಿ, ಪರಿಶುದ್ಧ ಜೀವನ

ಧರ್ಮಸ್ಥಳ: ಭಜನೆಗೆ ಭಕ್ತಿ ಮಾರ್ಗವೇ ಶ್ರೇಷ್ಠವಾಗಿದ್ದು ಪರಿಶುದ್ಧ ಭಾವನೆಯಿಂದ ಭಜನೆ ಮಾಡಿದರೆ ಆಧ್ಯಾತ್ಮಿಕ ಚೈತನ್ಯ ಜಾಗೃತಿಯಾಗಿ ಪರಿಶುದ್ಧ ಜೀವನ ಸಾಧ್ಯವಾಗುತ್ತದೆ. ನಾಸ್ತಿಕರನ್ನು ಆಸ್ತಿಕರಾಗಿ ಪರಿವರ್ತಿಸುವ  ಶಕ್ತಿ ಭಜನೆಗಿದೆ ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ 19ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಭಜನೆಯಿಂದ ದ್ವೇಷ, ಕ್ಲೇಶಗಳು ದೂರವಾಗಿ, ಅಂತರಂಗ ಪರಿಶುದ್ಧವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಅತ್ಮ ತೃಪ್ತಿಯೊಂದಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಭಜನೆಯ ಮೂಲಕ ಸಭ್ಯ, ಸುಸಂಸ್ಕøತ ನಾಗರಿಕ ಸಮಾಜ ರೂಪುಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ, ಭಜನೆಯಿಂದ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು, ಪ್ರೀತಿ-ವಿಶ್ವಾಸದ ಸಾಮರಸ್ಯದ ಬದುಕಿನೊಂದಿಗೆ ದುಶ್ಚಟ ಮುಕ್ತ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ ನಮ್ಮ ದೈನಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ದೇವರ ಪೂಜೆ ಆಗಿದೆ. ಸಿಕ್ಕಿದ ಅವಕಾಶದ ಸದುಪಯೋಗ ಮಾಡಿ ಸಾಧ್ಯವಾದಷ್ಟು ಪರೋಪಕಾರ ಮಾಡಬೇಕು. ಭಜನೆಯ ಸತ್ಸಂಗದಿಂದ ನಮ್ಮ ಅಂತರಂಗ ಪರಿಶುದ್ಧವಾಗುತ್ತದೆ. ಶ್ರದ್ಧೆ ಮತ್ತು ಭಕ್ತಿಯಿಂದ ರಾಗ, ತಾಳ, ಲಯ ಬದ್ಧವಾಗಿ ಭಜನೆ ಮಾಡಬೇಕು. ಭಜನೆಯ ಮೂಲಕ ಧರ್ಮದ ಮರ್ಮವನ್ನು ಸರಳವಾಗಿ ಗ್ರಹಿಸಬಹುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೇವರ ಅನುಗ್ರಹ ಪ್ರಾಪ್ತಿಗೆ ಭಜನೆ ಸರಳ ಮಾಧ್ಯಮವಾಗಿದೆ. ಭಜನೆಯ ಮೂಲಕ ಸತ್ಯ, ಸದಾಚಾರಗಳೊಂದಿಗೆ ಸಂಸ್ಕಾರಯುತ ಜೀವನ ನಡೆಸಬೇಕು. ಭಜನಾ ಮಂಡಳಿಗಳ ಮೂಲಕ ಊರಿನಲ್ಲಿ ಸಾಮರಸ್ಯ, ಸಂಘಟನೆ ಮತ್ತು ನಾಯಕತ್ವ ಬೆಳೆಯಬೇಕು ಎಂದು ಹೇಳಿದರು. ಜಾತಿ ಮತ ಬೇಧವಿಲ್ಲದೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಭಜನಾ ಮಂದಿರದಲ್ಲಿ ಸೇರಿ ಭಜನೆ ಮಾಡಿ ತನ್ಮೂಲಕ ಊರಿನ ಸ್ವಾಸ್ಥ್ಯ ಕಾಪಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ರಾವ್ ಧನ್ಯವಾದವಿತ್ತರು. ಶ್ರೀನಿವಾಸರಾವ್ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version