ಧರ್ಮಸ್ಥಳದ ದಲಿತ ಯುವಕನ ಕೊಲೆ ಪ್ರಕರಣ – ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಭೇಟಿಯಾದ ಎಸ್.ಡಿ.ಪಿ.ಐ. ನಿಯೋಗ

Spread the love

ಧರ್ಮಸ್ಥಳದ ದಲಿತ ಯುವಕನ ಕೊಲೆ ಪ್ರಕರಣ – ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಭೇಟಿಯಾದ ಎಸ್.ಡಿ.ಪಿ.ಐ. ನಿಯೋಗ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಕನ್ಯಾಡಿಯಲ್ಲಿ ಇತ್ತೀಚೆಗೆ ಕೊಲೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಇಂದು ಎಸ್‍ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ನೇತ್ರತ್ವದ ನಿಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ|| ಕೆ.ವಿ ರಾಜೇಂದ್ರ ಮತ್ತು ಸಮಾಜ ಕಲ್ಯಾಣ ಇಲಾಕೆಯ ಉಪ ನಿರ್ಧೇಶಕರನ್ನು ಭೇಟಿಯಾಗಿ ದಿನೇಶ್ ಕುಟುಂಬಕ್ಕೆ ಕೂಡಲೇ 10 ಲಕ್ಷ ರುಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ಹಾಗೂ ಸಂತ್ರಸ್ತ ಕುಟುಂಬಕ್ಕೆ ಎರಡು ಎಕರೆ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ ಮೊದಲ ಹಂತದಲ್ಲಿ ನಾಲ್ಕುವರೆ ಲಕ್ಷ ರುಪಾಯಿ ಯನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಕೂಡಲೇ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಆ ಮೊತ್ತವನ್ನು ಮೃತ ದಿನೇಶ ರವರ ಪತ್ನಿಗೆ ಹಸ್ತಾಂತರಿಸಲಿದೆ ಹಾಗೂ ಅವರ ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳು ನಿಯೋಗಕ್ಕೆ ಭರವಸೆ ನೀಡಿದರು.

ಈ ಬಗ್ಗೆ ಎರಡು ದಿನಗಳ ಹಿಂದೆ ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಎಸ್‍ಡಿಪಿಐ ರಾಜ್ಯ ಫ್ರಧಾನ ಕಾರ್ಯದರ್ಶಿ ಶ್ರೀಯುತ ಬಿ.ಆರ್. ಭಾಸ್ಕರ್ ಪ್ರಸಾದ್ ರವರ ನೇತ್ರತ್ವದ ನಿಯೋಗವು ಅಂದು ಜಿಲ್ಲಾಧಿಕಾರಿಯೊಂದಿಗೆ ದೂರವಾಣ ಮೂಲಕ ಸಂಪರ್ಕಿಸಿ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಸಂಭಂದಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಈ ಸಕಾಲಿಕ ಸ್ಪಂದನವನ್ನು ಎಸ್‍ಡಿಪಿಐ ಅಭಿನಂದಿಸುತ್ತಿದೆ.

ನಿಯೋಗದಲ್ಲಿ ಎಸ್‍ಡಿಪಿಐ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಅಕ್ಬರ್ ರಝಾ ಮತ್ತು ಕೋಶಾಧಿಕಾರಿ ಶರೀಫ್ ಪಾಂಡೇಶ್ವರ ಉಪಸ್ತಿತರಿದ್ದರು.


Spread the love