ಧಾರವಾಡದಲ್ಲಿ ಭೀಕರ ರಸ್ತೆ ಅಫಘಾತ: ಮರಕ್ಕೆ ಕ್ರೂಸರ್ ಡಿಕ್ಕಿ: 7 ಜನ ಸ್ಥಳದಲ್ಲೇ ದುರ್ಮರಣ

Spread the love

ಧಾರವಾಡದಲ್ಲಿ ಭೀಕರ ರಸ್ತೆ ಅಫಘಾತ: ಮರಕ್ಕೆ ಕ್ರೂಸರ್ ಡಿಕ್ಕಿ: 7 ಜನ ಸ್ಥಳದಲ್ಲೇ ದುರ್ಮರಣ

ಧಾರವಾಡ: ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಭೀಕರ ರಸ್ತೆ ಅಪಘಾತ ವು ಜಿಲ್ಲೆಯ ತಾಲೂಕಿನ ಬಾಡ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ.

ಬೆನಕಟ್ಟಿ ಗ್ರಾಮದ ಅನನ್ಯಾ(14), ಹರೀಶ್(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಮಹೇಶ್ವರಯ್ಯ(11), ಶಂಭುಲಿಂಗಯ್ಯ(35) ಮೃತಪಟ್ಟವರು. 6 ಜನರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಿಗದಿ ಗ್ರಾಮದ ಯುವಕನ ನಿಶ್ಚಿತಾರ್ಥ ಮುಗಿಸಿಕೊಂಡು ಮನ್ಸೂರು ಗ್ರಾಮದಿಂದ ಬೆನಕಟ್ಟಿಗೆ ಹಿಂದಿರುಗುವಾಗ ರಾತ್ರಿ 1.30ರಿಂದ 2 ಗಂಟೆ ಸುಮಾರಿಗೆ ಭೀಕರ ಅಪಘಾತ ನಡೆದಿದ್ದು, ಕ್ರೂಸರ್ ಚಾಲಕನ ಅಜಾಗರೂಕತೆಯೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಮಳೆಯಿಂದಾಗಿ ಮನ್ಸೂರು ರೇವಣಸಿದ್ದೇಶ್ವರ ಮಠಕ್ಕೆ ಮದುವೆ ಸ್ಥಳಾಂತರಿಸಿದ್ದರು. ಮದುವೆ ಮುನ್ನ ದಿನ ನಿಶ್ಚಿತಾರ್ಥಕ್ಕೆ ಸಂಬಂಧಿಕರು ತೆರಳಿದ್ದರು. ಇಂದು ಮದುವೆ ನಡೆಯಬೇಕಾಗಿತ್ತ. ಆದರೆ ಆಘಾತದಿಂದ ಸಂಬಂಧಿಕರು ಕಲ್ಯಾಣ ಮಂಟಪದ ಕಡೆಗೆ ಬರುತ್ತಿಲ್ಲ. ಸಂಭ್ರಮದ ಬದಲಿಗೆ ಮದುವೆ ನಡೆಯಬೇಕಾದ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದೆ. ಅಪಘಾತ ಸ್ಥಳಕ್ಕೆ ಎಸ್​ಪಿ ಕೃಷ್ಣಕಾಂತ್​ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಧಾರವಾಡ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್​ ಹೇಳಿಕೆ ನೀಡಿದ್ದು, ಅಪಘಾತಕ್ಕೀಡಾದ ಕ್ರೂಸರ್​​ನಲ್ಲಿ 13 ಜನ ಪ್ರಯಾಣಿಸುತ್ತಿದ್ದರು. ಕ್ರೂಸರ್​ನಲ್ಲಿದ್ದ 13 ಜನರ ಪೈಕಿ 7 ಜನರು ಮೃತಪಟ್ಟಿದ್ದಾರೆ. 6 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿಕೊಂಡು ತೆರಳುತ್ತಿದ್ರು. ಮನ್ಸೂರಿನಿಂದ ಬೆನಕಟ್ಟಿ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್​ ಮರಕ್ಕೆ ಡಿಕ್ಕಿಯಾಗಿತ್ತು. ಘಟನೆ ಬಗ್ಗೆ ಕೇಸ್​​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಈ ಭೀಕರ ದುರಂತ ಸಂಭವಿಸಿರಲಿಲ್ಲ ಅಂದ್ರೆ ಇಷ್ಟೊತ್ತಿಗೆ ಅಡುಗೆ ರೆಡಿ ಇರುತ್ತಿತ್ತು. ಮದುವೆಗೆ ೬೦೦ ಕ್ಕೂ ಹೆಚ್ಚು ಜನರಿಗೆ ಊಟಕ್ಕೆ ಹೇಳಿದ್ದರು. ಅದಕ್ಕಾಗಿ ಎಲ್ಲವನ್ನೂ ರೆಡಿ ಮಾಡಿದ್ದೆವು ಎಂದು ಟಿರ್ವಿಗೆ ಅಡುಗೆ ಬಸಣ್ಣೆಪ್ಪ ಹೇಳಿಕೆ ನೀಡಿದ್ದಾರೆ. ಆದ್ರೆ ಬೆಳಂಬೆಳಿಗ್ಗೆ ಈ ಅಪಘಾತ ನಡೆದಿದೆ‌. ಬೆಳಿಗ್ಗೆ ೩:೩೦ ವರೆಗೆ ನಮಗೆ ಅಡುಗೆ ಬೇಡ ಅಂದ್ರು. ಕಲ್ಯಾಣ ಮಂಟಮದ ಅಡುಗೆ ಕೋಣೆಯಲ್ಲೂ ಸಶ್ಮಾನ ಮೌನ ಆವರಿಸಿದೆ ಎಂದರು.

ನಿನ್ನೆ ಮಧ್ಯಾಹ್ನ ಮಠಕ್ಕೆ ವರನ ಸಂಬಂಧಿಕರು ಬಂದಿದ್ದರು. ಮಳೆ ಹಿನ್ನೆಲೆಯಲ್ಲಿ ಮದುವೆ ಶಿಫ್ಟ್ ಮಾಡೋದಾಗಿ ಹೇಳಿ, ನನಗೆ ಮನವಿ ಮಾಡಿಕೊಂಡರು ಎಂದು ಬಸವರಾಜ, ರೇವಣಸಿದ್ಧೇಶ್ವರ ಮಠದ ಸ್ವಾಮೀಜಿ ಟಿವಿ-೯ ಗೆ ಹೇಳಿಕೆ ನೀಡಿದ್ದಾರೆ. ಅನಿವಾರ್ಯವಾಗಿ ನಾನು ಒಪ್ಪಿಕೊಂಡಿದ್ದೆ. ಇದು ಅತ್ಯಂತ ಭೀಕರ ಘಟನೆ. ಇಂಥದ್ದು ನಡೆಯಬಾರದಿತ್ತು. ಚಾಲಕನ ಬೇಜವಾಬ್ದಾರಿಯಿಂದ ಘಟನೆ ನಡೆದಿದೆ ಎಂದು ಹೇಳಿದರು.


Spread the love