Home Mangalorean News Kannada News ಧಾರ್ಮಿಕ ಸ್ಥಳಗಳು ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರಗಳು: ಶಾಸಕ ಜೆ.ಆರ್.ಲೋಬೊ

ಧಾರ್ಮಿಕ ಸ್ಥಳಗಳು ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರಗಳು: ಶಾಸಕ ಜೆ.ಆರ್.ಲೋಬೊ

Spread the love

ಧಾರ್ಮಿಕ ಸ್ಥಳಗಳು ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರಗಳು: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಧಾರ್ಮಿಕ ಸ್ಥಳಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರಗಳು. ಈ ಆರಾಧನಾ ಕೇಂದ್ರಗಳ ಅಭಿವೃದ್ಧಿಗಾಗಿ ಸರ್ಕಾರ ಅನುದಾನವನ್ನು ಒದಗಿಸುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಕಸಬಾ ಬೆಂಗ್ರೆಯಲ್ಲಿ ಅಲ್ ಮದ್ರಸತುಲ್ ದೀನಿಯಾ ಶಾಲೆ ಮತ್ತು ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಈ ಪ್ರದೇಶ ಅಭಿವೃದ್ಧಿಗೆ ಶಾಸಕನಾಗಿ ತಾವು ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿ ನಾವೆಲ್ಲರೂ ಎಲ್ಲಾ ಧರ್ಮವನ್ನು ಪ್ರೀತಿಸುವ ಮೂಲಕ ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡಲು ಬದ್ಧರಾಗಿ ಕೆಲಸ ಮಾಡೋಣ ಎಂದರು.

ಖಾಜಿಗಳಾದ ಶೈಖುನಾತ್ವಾಕಾ ಉಸ್ತಾದ್ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಅಧ್ಯಕ್ಷತೆಯನ್ನು ಮಹಮ್ಮದ್ ಅಸ್ಲಾಮ್ ವಹಿಸಿದ್ದರು. ಅಬ್ದುಲ್ ರೆಹಮಾನ್ ಬಾಂಬಿಲ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಪೊರೇಟರ್ ಮೀರಾ ಕರ್ಕೇರ,ಚೇತನ ಬೆಂಗ್ರೆ, ಶೇಖರ್ ಸುವರ್ಣ, ಮೊಯ್ದಿನ್ ಬಿಲಾಲ್, ಅಶಿಪ್ ಅಹ್ಮದ್ ಹಮೀದ್ ಹುಸೈನ್, ಸಿ.ಪಿ.ಮುಸ್ತಾಪಾ, ಸುಲೈಮಾನ್, ಫಾರೂಕ್ ಹನೀಫ್, ನಾಸಿರ್ ಕೌಶಲ್, ಎಸ್.ಪಿ. ಅಬೂಬಕ್ಕರ್, ಹಾಜಿ ಮುಸ್ಲಿಯಾರ್, ಇಬ್ಬಿ ಕುಂಜಿಹಾಜಿ ಅವರು ಅತಿಥಿಗಳಾಗಿದ್ದರು. ಪ್ರಾರಂಭದಲ್ಲಿ ಮಹಮ್ಮದ್ ರಫಿಕ್ ಸ್ವಾಗತಿಸಿದರು.

ಮೂಲಭೂತ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಶಕ್ತಿನಗರ 35 ನೇ ಪದವು ಸೆಂಟ್ರಲ್ ವಾರ್ಡಿನ ರಾಜೀವ್ ನಗರ ಪ್ರದೇಶದ ಜನಸಂಪರ್ಕ ಸಭೆಯನ್ನು ಉದ್ದೇಶಿ ಮಾತನಾಡುತ್ತಿದ್ದರು.

ರಾಜೀವ್ ನಗರ ಪ್ರದೇಶದಲ್ಲಿ ಹಕ್ಕುಪತ್ರ, ಕುಡಿಯುವ ನೀರು ಸಮಸ್ಯೆ ಸಹಿತ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿವಾರಿಸಲು ಜನರು ನೀಡಿದ ಮನವಿಪತ್ರ ಸ್ವೀಕರಿಸಿದ ಶಾಸಕರು ತಾನು ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಮಿಷನರ್ ಆಗಿದ್ದಾಗ 2003 ರಲ್ಲಿ ಬಡವರಿಗೆ, ನಿರ್ಗತಿಕರಿಗೆ ಮೂರುವರೆ ಸೆಂಟ್ಸ್ ಸ್ಥಳ ನೀಡಿದ್ದುದನ್ನು ಪ್ರಸ್ತಾಪಿಸಿ ಈ ಪ್ರದೇಶ ಮುಂದಿನ ದಿನಗಳಲ್ಲಿ ಬಹಳಷ್ಟು ಬೆಳೆಯಲಿದೆ ಎಂದರು.

ರಾಜೀವ್ ನಗರ ಪ್ರದೇಶದಲ್ಲಿ ಸಧ್ಯದಲ್ಲೇ 1100 ಮನೆಗಳು ಬರಲಿದ್ದು ಇಲ್ಲಿ ಮಕ್ಕಳಿಗೆ ಅಗತ್ಯವಾದ ಪಾರ್ಕ್, ಮೂಲಭೂತ ಸೌಕರ್ಯಗಳ ಸಹಿತ ಗಮನ ಸೆಳೆಯಲಿದೆ ಎಂದರು.

ಸಭೆಯಲ್ಲಿ, ಕಳ್ಳಿಗೆ ತಾರಾನಾಥ ಶೆಟ್ಟಿ, ಮೋಹನ್ ಶೆಟ್ಟಿ, ಕಾರ್ಪೊರೇಟರ್ ಜುಬೇದಾ, ಮಾಜಿ ಮೇಯರ್ ಅಜೀಜ್, ಶಶಿರಾಜ್ ಅಂಬಟ್ಟಿ, ಆಲ್ವಿನ್ ಪಾಯಸ್, ಕುಮಾರ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version