ಧ್ಯೇಯ ಮತ್ತು ಗುರಿಯೊಂದಿಗೆ ಜೀವನ ಸಾಕಾರಗೊಳಿಸಿ – ಪ್ರೋ. ನರೇಂದ್ರನಾಥ್ ಎಸ್

Spread the love

ಧ್ಯೇಯ ಮತ್ತು ಗುರಿಯೊಂದಿಗೆ ಜೀವನ ಸಾಕಾರಗೊಳಿಸಿ – ಪ್ರೋ. ನರೇಂದ್ರನಾಥ್ ಎಸ್

ಕುಂದಾಪುರ: ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಕಾಲೇಜಿನ ಕ್ಯಾಂಪಸ್ ನಲ್ಲಿ “ಉದ್ಯೋಗ ಮೇಳ” ವನ್ನು ಆಯೋಜಿಸಲಾಗಿತ್ತು.

ಉದ್ಯೋಗ ಮೇಳ ಉಧ್ಘಾಟಿಸಿದ ಮುಖ್ಯ ಅತಿಥಿಗಳಾದ ಸುರತ್ಕಲ್ ಎನ್.ಐ.ಟಿ.ಕೆ ಯ ಪ್ರಾಧ್ಯಾಪಕರಾದ ಪ್ರೊ. ನರೇಂದ್ರನಾತ್ ಎಸ್., ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿ ಮಾತಾನಾಡಿ ಪ್ರತಿಯೊಬ್ಬರೂ ತಮ್ಮದೇ ಆದ ಧ್ಯೇಯ ಮತ್ತು ಗುರಿಯನ್ನು ಅಳವಡಿಸಿಕೊಂಡು ಅದನ್ನು ಸಾಕಾರಗೊಳಿಸುವ ಕಡೆ ಪ್ರಯತ್ನಶೀಲರಗಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ|ಚಂದ್ರ ರಾವ್ ಮದಾನೆ ಇವರು ಅಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಕೆಲಸ
ಮಾಡುವ ಮನಸ್ಥಿತಿ ಹಾಗೂ ಶ್ರದ್ಧೆ ಇಟ್ಟುಕೊಂಡು ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ಲೇಸ್ಮೆಂಟ್ ಡೀನ್ ಸತ್ಯನಾರಾಯಣ ಇವರು ಅಭ್ಯರ್ಥಿಗಳ ಕೌಶಲ್ಯ ಹಾಗೂ ಪ್ರತಿಭೆಗೆ ತಕ್ಕಂತಹ ಕಂಪೆನಿಗಳನ್ನು ಆಯ್ದುಕೊಳ್ಳಲು ಸಲಹೆ ನೀಡಿದರು

ಮೇಳದಲ್ಲಿ ಹೆಸರಾಂತ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪೆನಿಗಳು ಪಾಲ್ಗೊಗೊಂಡಿದ್ದು ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೇವೆ ಎಂಬುದಾಗಿ ಹೇಳಿದರು.

ಕೊಟುಂಬ್ ಸಂಸ್ಥೆಯು ಈ ಉದ್ಯೋಗ ಮೇಳದ ಸಹಭಾಗಿತ್ವವನ್ನು ಹೊಂದಿದ್ದಾರೆ. ಆ ಸಂಸ್ಥೆಯ ಸಹ ಸಂಸ್ಥಾಪಕ ರಾದ ಶ್ರೀ ಹೇಮಂತ್ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ವಿಭಾಗದ ಮುಖ್ಯಸ್ಥರು, ಸಿಬಂದಿ ವರ್ಗ ಹಾಗು ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.

ಕಾಲೇಜಿನ ಅಕಾಡೆಮಿಕ್ ಡೀನ್, ಡಾ| ಪ್ರತಿಭಾ ಎಮ್. ಪಟೇಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಮಾರ್ಚ್ 27ರಂದು ಉದ್ಯೋಗ ಮೇಳದ ಎರಡನೇ ಆವ್ರತ್ತಿ ಇದ್ದು ಉದ್ಯೋಗಾಕಾಂಕ್ಷಿಗಳು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಮಾರ್ಚ್ 27ರಂದು ನೇರ ಸಂದರ್ಶನ ಇರುತ್ತದೆ.


Spread the love