ನಂಜನಗೂಡಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Spread the love

ನಂಜನಗೂಡಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ನಂಜನಗೂಡು: ಸರ್ಕಾರ ವಿದ್ಯುತ್ ನ್ನು ಖಾಸಗೀಕರಣಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ರೈತರು ಇಲ್ಲಿನ ಮೈಸೂರು ಮತ್ತು ನಂಜನಗೂಡು ರಾಷ್ಟ್ರೀಯ ಹೆದ್ದಾರಿ ರಸ್ತೆ ಚಾಮಲಾಪುರ ಹುಂಡಿ ಸರ್ಕಲ್ ನಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ರೈತ ಮುಖಂಡ ಭಾಗ್ಯರಾಜ್ ಮಾತನಾಡಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡಲಿಕ್ಕೆ ಹೊರಟರೆ ಅದು ರೈತರಿಗೆ ಮೋಸ ಮಾಡಿದಂತೆ. ರೈತರು ಕೃಷಿಯಲ್ಲಿ ಇರಬಾರದು ಎಂದು ಎಪಿಎಂಸಿ ಯಲ್ಲಿ ಕಾಯಿದೆ ಜಾರಿಗೊಳಿಸಿದರು. ಭೂ ಸುಧಾರಣೆ ಜಾರಿಗೆ ತಂದರು. ಸಂಸದರು, ಶಾಸಕರು ರೈತರ ಬಗ್ಗೆ ಕಾಳಜಿ ಇಲ್ಲದೆ ತಮ್ಮ ಸಚಿವ ಸ್ಥಾನಕ್ಕಾಗಿ ಕಿತ್ತಾಡುತ್ತಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಗ್ರಾಮಗಳಿಗೆ ಬಂದರೆ ಗ್ರಾಮಗಳಿಗೆ ಸೇರಿಸದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ರೈತರಿಗೆ ಬಹಳ ಅನ್ಯಾಯವಾಗಿದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ರವಿ, ಮಹದೇವಸ್ವಾಮಿ, ಭುಜಂಗ, ಪ ಮಹೇಶ್, ಚಿಕ್ಕಸ್ವಾಮಿ, ಮಂಜುನಾಥ್, ಮಾದಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.


Spread the love