ನಂಜನಗೂಡು: ಚರಂಡಿಯಲ್ಲಿ ಸಿಲುಕಿದ್ದ ಕರುವಿನ ರಕ್ಷಣೆ

Spread the love

ನಂಜನಗೂಡು: ಚರಂಡಿಯಲ್ಲಿ ಸಿಲುಕಿದ್ದ ಕರುವಿನ ರಕ್ಷಣೆ

ನಂಜನಗೂಡು: ಚರಂಡಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕರುವನ್ನು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಪಟ್ಟಣ ಆರ್ ಪಿ ರಸ್ತೆಯಲ್ಲಿ ನಡೆದಿದೆ.

ಆರ್.ಪಿ.ರಸ್ತೆಯಲ್ಲಿ ದೊಡ್ಡ ಚರಂಡಿಯಿದ್ದು, ಈ ಚರಂಡಿಯನ್ನು ಚಪ್ಪಡಿ ಕಲ್ಲುಗಳಿಂದ ಮುಚ್ಚಲಾಗಿದೆ. ಆದರೆ ಕೆಲವೊಮ್ಮೆ ಚರಂಡಿಯನ್ನು ಸ್ವಚ್ಛಗೊಳಿಸುವ ವೇಳೆ ಚಪ್ಪಡಿಕಲ್ಲನ್ನು ಪಕ್ಕಕ್ಕೆ ಸರಿಸಲಾಗುತ್ತದೆ. ಕೆಲಸ ಮುಗಿದ ನಂತರ ಚಪ್ಪಡಿ ಕಲ್ಲನ್ನು ಮುಚ್ಚದೆ ಬಿಡುವುದರಿಂದ ಚರಂಡಿಗೆ ಮೂಕ ಪ್ರಾಣಿಗಳು ಬೀಳುವುದು, ಸಾಯುವುದು ಆಗಾಗ್ಗೆ ನಡೆಯುತ್ತಿರುತ್ತದೆ.

ಈ ನಡುವೆ ಅಕ್ಕಪಕ್ಕದ ಮನೆಯವರು ಚರಂಡಿಯ ಅಕ್ಕ ಪಕ್ಕದಲ್ಲಿ ಹಣ್ಣುಗಳನ್ನು, ಮಿಕ್ಕಿರುವ ಆಹಾರ ಪದಾರ್ಥಗಳನ್ನು ಹಾಕಿರುತ್ತಾರೆ ಇದನ್ನು ತಿನ್ನಲು ಬರುವ ಸಣ್ಣಪುಟ್ಟ ಕರುಗಳು ಬಂದು ತಿಂದ ನಂತರ ತೆರೆದಿರುವ ಚರಂಡಿಗೆ ಬೀಳುತ್ತವೆಯಲ್ಲದೆ ಚರಂಡಿಯಿಂದ ಮೇಲೆ ಹತ್ತಿ ಬರಲಾಗದೆ ಒದ್ದಾಡುತ್ತವೆ.

ಮೇಲಕ್ಕೆ ಬಾರದೆ ಆಕಡೆ ಈಕಡೆ ತಿರುಗಾಡದೆ ಒದ್ದಾಡುತ್ತವೆ ಕೆಲವು ಕರುಗಳು ಸಿಕ್ಕಿಕೊಂಡು ಸಾವನ್ನು ಅಪ್ಪುತ್ತಿವೆ ಇದಕ್ಕೆಲ್ಲ ಕಾರಣ ನಗರಸಭೆ ಮೇಲ್ಚಾವಣಿಯನ್ನು ಮುಚ್ಚದೆ ಇರುವುದರಿಂದ ಈ ರೀತಿ ಅನಾಹುತಗಳು ನಡೆಯುತ್ತಲೇ ಇವೆ

ಈ ನಡುವೆ ಕರುವೊಂದು ಇದೇ ರೀತಿ ಚರಂಡಿಯೊಳಗೆ ಬಿದ್ದಿದ್ದು, ಇದನ್ನು ನೋಡಿದ ಸಾರ್ವಜನಿಕರು ಕರುವನ್ನು ಚರಂಡಿಯಿಂದ ಹಗ್ಗವನ್ನು ಬಳಸಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಾದರೂ ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಲಿ.


Spread the love