ನಂದಳಿಕೆಯಲ್ಲಿ ಇನ್ನೋವಾ ಕಾರು – ಸ್ಕೂಟರ್ ಡಿಕ್ಕಿ: ಸಹೋದರರಿಬ್ಬರು ಮೃತ್ಯು

Spread the love

ನಂದಳಿಕೆಯಲ್ಲಿ ಇನ್ನೋವಾ ಕಾರು – ಸ್ಕೂಟರ್ ಡಿಕ್ಕಿ: ಸಹೋದರರಿಬ್ಬರು ಮೃತ್ಯು

ಬೆಳ್ಮಣ್: ಇನ್ನೋವಾ ಕಾರು-ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಸಹೋರರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ನಂದಳಿಕೆ ಮಾವಿನಕಟ್ಟೆಯ ಬಳಿ ನಡೆದಿದೆ.

ಮೃತರನ್ನು ನಂದಳಿಕೆಯ ನಿವಾಸಿಗಳಾದ ಸತೀಶ್ ಕುಲಾಲ್(28) ಹಾಗೂ ಸಂದೀಪ್ ಕುಲಾಲ್ ಎಂದು ಗುರುತಿಸಲಾಗಿದೆ.

ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಸಂದೀಪ್ ಸ್ಥಳದಲ್ಲಿಯೇ ಮೃತ ಪಟ್ಟರೆ, ಸತೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಸಂದೀಪ್ ಅವಿವಾಹಿತರಾಗಿದ್ದು, ಸತೀಶ್ ಗೆ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ತಿಳಿದು ಬಂದಿದೆ.

ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love