ನಕಲಿ ದಾಖಲೆ ಸೃಷ್ಠಿಸಿ ವಂಚಿಸುತ್ತಿದ್ದವರ ಬಂಧನ

Spread the love

ನಕಲಿ ದಾಖಲೆ ಸೃಷ್ಠಿಸಿ ವಂಚಿಸುತ್ತಿದ್ದವರ ಬಂಧನ

ಮೈಸೂರು: ಸೈಟು ಮತ್ತು ಜಮೀನುಗಳ ನಕಲಿ ದಾಖಲೆ ಸೃಷ್ಠಿಸಿ ಮೋಸ ಮಾಡುತ್ತಿದ್ದ ಮೂವರನ್ನು ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ದಾಖಲಾತಿಗಳು, ಸೀಲುಗಳು, ಲ್ಯಾಪ್‌ಟಾಪ್, ಪ್ರಿಂಟರ್, ಸ್ಕ್ಯಾನರ್ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸರ್ವಿಸ್ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮೂರು ಜನ ಆಸಾಮಿಗಳು ಸೈಟ್‌ಗಳು ಮತ್ತು ಜಮೀನುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರನ್ನು ವಂಚಿಸಿ, ಮೋಸದಿಂದ ಅಕ್ರಮ ಲಾಭ ಮಾಡಿಕೊಳ್ಳುತ್ತಿರುವುದಾಗಿ ಡಿಸಿಪಿ ಪ್ರದೀಪ್ ಗುಂಟಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಈ ಆರೋಪಿಗಳ ಪತ್ತೆ ಡಿಸಿಪಿ ವಿಶೇಷ ತಂಡವನ್ನು ರಚಿಸಿದ್ದರು.

ಈ ತಂಡವು ಕುವೆಂಪುನಗರ ಠಾಣೆ ವ್ಯಾಪ್ತಿಯ ರಾಮಕೃಷ್ಣನಗರ ಐ ಬ್ಲಾಕ್‌ನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಗೋಲ್ಡನ್ ಬೆಲ್ಸ್ ಸರ್ವೀಸ್ ಅರ್ಪಾಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ರೂಂ ನಂ.೩೦೧ರ ಮೇಲೆ ಸೋಮವಾರ ದಾಳಿ ಮಾಡಿ ಪರಿಶೀಲಿಸಿದ್ದು, ಮೂವರು ಆರೋಪಿಗಳು ಸೈಟ್‌ಗಳು ಮತ್ತು ಜಮೀನುಗಳ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ಕೃತ್ಯದಲ್ಲಿ ತೊಡಗಿರುವುದು ಕಂಡು ಬಂದ ಮೇರೆಗೆ ಮೂರು ಜನ ಆರೋಪಿಗಳನ್ನು ಬಂಽಸಿ, ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಪರಿಕರಗಳನ್ನು, ವಿವಿಧ ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳಿಗೆ ಸೇರಿದ ನಕಲಿ ಸೀಲ್‌ಗಳು, ಅಽಕಾರಿಗಳ ನಕಲಿ ಸೀಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಪ್ರದೀಪ್ ಗುಂಟಿ, ಕೃಷ್ಣರಾಜ ವಿಭಾಗದ ಎಸಿಪಿ ಎಸ್.ಇ. ಗಂಗಾಧರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆಯ ಇನ್ಸ್‌ಪೆಕ್ಟರ್ ಕೆ. ಷಣ್ಮುಗವರ್ಮ, ಎಸ್‌ಐಗಳಾದ ಎಂ. ರಾಧ, ಎಸ್.ಪಿ. ಗೋಪಾಲ್, ಪ್ರೊ.ಪಿಎಸ್‌ಐ ಪ್ರಭು, ಎಎಸ್‌ಐ ಮುರಳೀಗೌಡ, ಸಿಬ್ಬಂದಿ ಪುರುಷೋತ್ತಮ್, ಕೃಷ್ಣ, ಮಂಜುನಾಥ್, ರಾಜುಸಾಬ್, ಮೌನೇಶ, ಅಮೋಘ್, ಪುಟ್ಟಪ್ಪ, ಹಜರತ್ ಅಲಿ, ಮಹೇಶ್, ಯೋಗೇಶ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.


Spread the love

Leave a Reply

Please enter your comment!
Please enter your name here