ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪೂರ್ಣಾವಧಿ ಸಹಾಯಕ ನಿರ್ದೇಶಕರು, ಸಹಾಯಕ ಇಂಜಿನಿಯರ್‌ ನೇಮಿಸುವಂತೆ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಮನವಿ

Spread the love

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪೂರ್ಣಾವಧಿ ಸಹಾಯಕ ನಿರ್ದೇಶಕರು, ಸಹಾಯಕ ಇಂಜಿನಿಯರ್‌ ನೇಮಿಸುವಂತೆ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಮನವಿ

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪೂರ್ಣಾವಧಿಯಲ್ಲಿ ಕಾರ್ಯನಿರ್ವಹಿಸುವ ಟಿ.ಪಿ.ಎಂ (ಸಹಾಯಕ ನಿರ್ದೇಶಕರು) ಮತ್ತು ಎ.ಡಿ.ಟಿ.ಪಿ (ಸಹಾಯಕ ಇಂಜಿನಿಯರ್) ಅವರನ್ನು ನೇಮಿಸುವ ಕುರಿತು ಉಡುಪಿ ಜಿಲ್ಲಾಧಿಕಾರಿಯಾದ ಕೂರ್ಮ ರಾವ್ ಅವರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಕೋವಿಡ್ ಲಾಕ್ ಡೌನ್‌ನಿಂದಾದ ಸಮಸ್ಯೆಗಳು, ಮರಳಿನ ಸಮಸ್ಯೆಗಳಿಂದ ಕೊಂಚ ಚೇತರಿಕೆ ಕಂಡಿದ್ದ ಕಟ್ಟಡ ನಿರ್ಮಾಪಕರು, ಕಾರ್ಮಿಕರು ಮತ್ತು ಉಡುಪಿಯ ಜನತೆ ಈಗ ಕಟ್ಟಡ ಸಾಮಾಗ್ರಿಗಳ ಅತೀವವಾದ ಬೆಲೆಏರಿಕೆಯ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ನಾವೀಗಾಗಲೇ ನೋಡುತ್ತಿದ್ದೇವೆ, ತುಂಡು ಭೂಮಿಯನ್ನು ಸ್ವಂತ ಮನೆ ನಿರ್ಮಿಸಲು ಖರೀದಿಸಿ ಭೂ ಪರಿವರ್ತನೆ, ಏನಿವೇಶನ, ಇ ಖಾತಾ ಮತ್ತು ಕಟ್ಟಡ ಪರವಾನಿಗೆಗೆ ಅನುವುಗೊಳಿಸುವಲ್ಲಿ ಜನತೆ ಕಂದಾಯ ಇಲಾಖೆ ಸುತ್ತುವಲ್ಲಿ ಪಡುತ್ತಿರುವ ಕಷ್ಟವೂ ಹೇಳತೀರದು.

ಮೇಲೆ ತಿಳಿಸಿದ ಎಲ್ಲಾ ಕಾರ್ಯಗಳಿಗೂ ಕಂದಾಯ ಇಲಾಖೆಯ ಎಲ್ಲಾ ವಿಭಾಗಕ್ಕೆ ಕೊಂಡಿ ಅಥವಾ ಸೇತುವೆಯಂತೆ ಕೆಲಸಮಾಡುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿಗೆ ಕಳೆದ ಒಂದು ತಿಂಗಳಿಂದ ಟಿ.ಪಿ.ಎಂ. ಮತ್ತು ಸಮಾಯಕ ಇಂಜಿನಿಯರ್ ಇಲ್ಲದಿರುವುದರಿಂದ ಸದ್ರಿ ಸಮಸ್ಯೆಯು ಮತ್ತಷ್ಟು ಉಲ್ಬಣಗೊಂಡಿರುತ್ತದೆ. ಭೂಪರಿವರ್ತನೆಗೆ ನಿರಕ್ಷೇಪಣಾ ಪತ್ರ, ಏಕನಿವೇಶನ, ವಲಯ ಪ್ರಮಾಣ ಪತ್ರ, ಧೃಡೀಕೃತ ನಕಲುಗಳು ಹಾಗೂ ಕಟ್ಟಡ ಪರವಾನಿಗೆಗಳಿಗೆ ಅರ್ಜಿಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈಗಾಗಲೇ ತುಂಬಿಹೋಗಿರುತ್ತವೆ. ಇದರಿಂದಾಗಿಯೇ ಕಟ್ಟಡ ನಿರ್ಮಾಣ ಅಥವಾ ಸ್ಥಿರಾಸ್ತಿಗಳ ನೊಂದಣಿಯ ಕೆಲಸಕಾರ್ಯಗಳು ಅಸಾಧ್ಯವಾಗುತ್ತದೆ.

ಸರಕಾರದ ಬೊಕ್ಕಸಕ್ಕೆ ಇವೆಲ್ಲಾ ಕೆಲಸಕಾರ್ಯಗಳಿಂದ ಬರುವ ಆದಾಯವನ್ನು ಮತ್ತು ಉಡುಪಿ ಜನತೆಯ ಈ ಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪೂರ್ಣಾವಧಿಯಲ್ಲಿ ಕಾರ್ಯನಿರ್ವಹಿಸುವ ಟಿ.ಪಿ.ಎಂ ಮತ್ತು ಸಹಾಯಕ ಇಂಜಿನಿಯರ್ ಗಳನ್ನು ಕೂಡಲೇ ನೇಮಿಸಲು‌ ಸರಕಾರಕ್ಕೆ ಪತ್ರ ಬರೆಯುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಜತ್ತನ್ನ, ಯತೀಶ್ ಕರ್ಕೇರ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ, ಕಡೆಕಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನವೀನ್ ಶೆಟ್ಟಿ, ಸದಸ್ಯರಾದ ಸುಕನ್ಯಾ ಪೂಜಾರಿ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಶರತ್ ಶೆಟ್ಟಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಡಿಯೋನ್ ಡಿ’ಸೋಜಾ, ಮಾಜಿ ನಗರಸಭಾ ಸದಸ್ಯರಾದ ನಾರಾಯಣ್ ಕುಂದರ್ ಕಲ್ಮಾಡಿ, ಗಣೇಶ್ ನೆರ್ಗಿ, ಮುಖಂಡರಾದ ಗಣೇಶ್ ದೇವಾಡಿಗ, ಸತೀಶ್ ಕೊಡವೂರು, ಸತೀಶ್ ಕುಮಾರ್ ಮಂಚಿ, ಲಕ್ಷ್ಮೀಶ್ ಶೆಟ್ಟಿ, ಸತೀಶ್ ಪೂಜಾರಿ ಬನ್ನಂಜೆ, ಸಾಯಿರಾಜ್ ಕಿದಿಯೂರು, ಪ್ರಮೀಳಾ ಸುವರ್ಣ, ಪ್ರಶಾಂತ್ ಶೆಟ್ಟಿ ದೊಡ್ಡಣಗುಡ್ಡೆ ಹಾಗೂ ಸಂಜಯ್ ಆಚಾರ್ಯ ಉಪಸ್ಥಿತರಿದ್ದರು


Spread the love