ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ರಿಂದ ಪ್ರದೇಶ ಪರಿಚಿತ ಮಾಡುವ ಕಾರ್ಯಾಚರಣೆ

Spread the love

ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ರಿಂದ ಪ್ರದೇಶ ಪರಿಚಿತ ಮಾಡುವ ಕಾರ್ಯಾಚರಣೆ

ಮಂಗಳೂರು: ಪ್ರದೇಶ ಪರಿಚಿತ ಮಾಡುವ ಕಾರ್ಯಾಚರಣೆಯನ್ನು ಬಂದರು (ಉತ್ತರ) ಮತ್ತು ಪಾಂಡೇಶ್ವರ (ದಕ್ಷಿಣ) ಠಾಣಾ ಸರಹದ್ದಿನಲ್ಲಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.

ಮಹಿಳೆಯರು ಮತ್ತು ವೃದ್ಧರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ಪ್ರದೇಶಗಳು, ವಸತಿ ಪ್ರದೇಶಗಳು, ಧಾರ್ಮಿಕವಾಗಿ ಪ್ರಮುಖ ಪ್ರದೇಶಗಳನ್ನು ಹಾಗೂ ಸಂಚಾರ ದಟ್ಟನೆಯ ಸ್ಥಳಗಳನ್ನು ಅವಲೋಕಿಸಲಾಯಿತು.

ಈ ಸಂದರ್ಭದಲ್ಲಿ ಡಿಸಿಪಿ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ಜಗದೀಶ್, ಇನ್ಸ್ ಪೆಕ್ಟರ್ ಗಳಾದ ಗೋವಿಂದರಾಜು, ಮಹೇಶ್ ಪ್ರಸಾದ್, ಜ್ಯೋತಿರ್ಲಿಂಗ್, ಮತ್ತು ಲೋಕೇಶ್ ಉಪಸ್ಥಿತರಿದ್ದರು.


Spread the love