ನಟ ದರ್ಶನ್‍ ಹೆಸರಲ್ಲಿ 25 ಕೋಟಿ ವಂಚಿಸಲೆತ್ನಿಸಿದ ಮಹಿಳೆ

Spread the love

ನಟ ದರ್ಶನ್‍ ಹೆಸರಲ್ಲಿ 25 ಕೋಟಿ ವಂಚಿಸಲೆತ್ನಿಸಿದ ಮಹಿಳೆ

ಮೈಸೂರು: ಮಹಿಳೆಯೊಬ್ಬಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ವಂಚಿಸಲೆತ್ನಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ದರ್ಶನ್ ನಗರದ ಎಸಿಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದು, ತನಿಖೆ ಮುಂದುವರೆದಿದೆ.

ಇಷ್ಟಕ್ಕೂ ಆ ಮಹಿಳೆ ಯಾರು? ದರ್ಶನ್ ಹೆಸರಲ್ಲಿ ಬರೋಬ್ಬರಿ 25 ಕೋಟಿ ವಂಚನೆಗೆ ಆಕೆ ಮುಂದಾಗಿದ್ದಾಳೆ ಎನ್ನುವುದಾದರೆ ಆಕೆಯ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಉದ್ಭವಿಸಿದೆ. ಇಷ್ಟಕ್ಕೂ ನಡೆದಿದ್ದೇನು ಎಂಬುದನ್ನು ನೋಡುವುದಾದರೆ ಕಳೆದ ಕೆಲವು ದಿನಗಳ ಹಿಂದೆ ಒಬ್ಬ ಮಹಿಳೆ ಬಂದು ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ನಿಮ್ಮ ಹೆಸರಿನಲ್ಲಿ ಶೂರಿಟಿ ಹಾಕಿಸಿಕೊಂಡು ಒಬ್ಬಳು ಮಹಿಳೆ 25 ಕೋಟಿ ಸಾಲ ಪಡೆಯುತ್ತಿದ್ದು, ನೀವು ಶ್ಯೂರಿಟಿ ಹಾಕಿಕೊಡುವಂತೆ ಹೇಳಿದ್ದಾಳೆ. ತಕ್ಷಣ ಎಚ್ಚೆತ್ತುಕೊಂಡು ದರ್ಶನ್ ವಿಚಾರಣೆ ಮಾಡಿದಾಗ ಆಕೆ ಬ್ಯಾಂಕ್ ಮ್ಯಾನೇಜರ್ ಅಲ್ಲ ಎಂಬುದು ಗೊತ್ತಾಗಿದೆ. ಅಲ್ಲದೆ ಅದೇ ಮಹಿಳೆ ದರ್ಶನ್ ಹೆಸರಿನಲ್ಲಿ ವಂಚಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

ಇನ್ನು ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಆ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ಗೊತ್ತಾಗಿದೆ. ಸದ್ಯ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆಕೆಯನ್ನು ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಅವರೇ ಕೆಲವು ಸಮಯಗಳ ಹಿಂದೆ ದರ್ಶನ್ ಗೆ ಪರಿಚಯಿಸಿದ್ದರು ಎನ್ನಲಾಗಿದೆ. ನಿರ್ಮಾಪಕ ಉಮಾಪತಿ, ನಟ ದರ್ಶನ್ ಮತ್ತು ಮಹಿಳೆಯನ್ನು ಮೈಸೂರಿನ ನಜರ್ ಬಾ‍ದ್ ನಲ್ಲಿರುವ ಎಸಿಪಿ ಕಚೇರಿಗೆ ಕರೆಯಿಸಿ ಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ಮುಗಿಸಿ ಬಂದ ನಟ ದರ್ಶನ್ ಮಾಧ್ಯಮದವರೊಂದಿಗೆ ಮಾತನಾಡಿ ನನಗೆ ಒಂದು ತಿಂಗಳ ಹಿಂದೆಯೇ ನನ್ನ ಡಾಕ್ಯುಮೆಂಟ್ ಪೋರ್ಜರಿ ಆಗಿರುವುದು ಗಮನಕ್ಕೆ ಬಂದಿತ್ತು. ಆ ಮಹಿಳೆಯನ್ನು ಯಾರು ಪರಿಚಯಿಸಿದ್ದರು, ಹೇಗೆ ಪರಿಚಯವಾಯಿತು ಎಂಬುದು ತನಿಖೆ ನಂತರ ಗೊತ್ತಾಗಲಿದೆ. ಒಂದು ವೇಳೆ ಸ್ನೇಹಿತರಿಂದಲೇ ಮೋಸ ಆಗಿದ್ದರೆ ಅದನ್ನು ಸಹಿಸುವುದಿಲ್ಲ. ನಾನೇ ಕಥೆ ಹೇಳಿದರೆ ಚೆನ್ನಾಗಿರುವುದಿಲ್ಲ ಎಲ್ಲವೂ ತನಿಖೆ ಬಳಿಕ ಗೊತ್ತಾಗಲಿದೆ ಎಂದು ಹೇಳಿದ್ದಾರೆ.


Spread the love