ನರ್ಮ್ ಬಸ್ಸು ಸೌಲಭ್ಯ ಆರಂಭಿಸಲು ಮನವಿ

Spread the love

ನರ್ಮ್ ಬಸ್ಸು ಸೌಲಭ್ಯ ಆರಂಭಿಸಲು ಮನವಿ

ಉಡುಪಿ: ವಡಭಾಂಡೇಶ್ವರ, ಬೈಲಕೆರೆ, ಬಡಾನಿಡಿಯೂರು ಹಾಗೂ ಸನ್ಯಾಸಿ ಮಠ ವ್ಯಾಪ್ತಿಗೆ ನರ್ಮ್ ಬಸ್ಸುಗಳ ಸೌ¯ಭ್ಯ ಒದಗಿಸುವಂತೆ ಕೋರಿ ಕೆ ಎಸ್ ಆರ್ ಟಿಸಿ ಡಿಪೋ ಅಧಿಕಾರಿ ಉದಯ್ ಕುಮಾರ್ ಶೆಟ್ಟಿಯವರಿಗೆ ಮನವಿ ಸಲ್ಲಿಸಲಾಯಿತು.

ವಡಭಾಂಡೇಶ್ವರ (ಮಲ್ಪೆ), ಬೈಲಕೆರೆ, ಬಡಾನಿಡಿಯೂರು ಹಾಗೂ ಸನ್ಯಾಸಿ ಮಠದ ನಿವಾಸಿಗಳಿಗೆ ಈ ಹಿಂದೆ ನರ್ಮ್ ಬಸ್ಸಿನ ಸೌಲಭ್ಯವಿದ್ದು ಇತ್ತೀಚೆಗೆ ಅದನ್ನು ನಿಲುಗಡೆ ಮಾಡಿರುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಕೆಲಸಕ್ಕೆ ತೆರಳುವವರಿಗೆ ತೊಂದರೆ ಉಂಟಾಗಿದ್ದು ಕೂಡಲೇ ಬಸ್ಸಿನ ವ್ಯವಸ್ಥೆಯನ್ನು ಪುನರ್ ಆರಂಭಿಸುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯ ಪ್ರಖ್ಯಾತ್ ಶೆಟ್ಟಿ, ಮಾಜಿ ಅಧ್ಯಕ್ಷ ಯತೀಶ್ ಕರ್ಕೇರಾ, ಕೃಷ್ಣ ಅಮೀನ್, ವಿಲ್ಫ್ರೇಡ್ ಕೇಶವ ಕೋಟ್ಯಾನ್, ವಿಠಲ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


Spread the love