
ನವದೆಹಲಿ: ಮದುವೆ ಸಮಾರಂಭದಲ್ಲಿ ಕುಣಿಯುತ್ತ ಕುಣಿಯುತ್ತ ಕುಸಿದು ಬಿದ್ದು ಪ್ರಾಣ ಕಳ್ಕೊಂಡ!
ನವದೆಹಲಿ: ರಾಜ್ಯ ಮಾತ್ರವಲ್ಲ ದೇಶಾದ್ಯಂತ ಹೃದಯಾಘಾತಕ್ಕೀಡಾಗಿ ಸಾಯುತ್ತಿರುವ ಪ್ರಕರಣಗಳು ಸಂಭವಿಸುತ್ತಿವೆ. ಇತ್ತೀಚೆಗಷ್ಟೇ ಉಡುಪಿಯಲ್ಲಿ ಯುವತಿಯೊಬ್ಬಳು ಸಮಾರಂಭವೊಂದರಲ್ಲಿ ಹೆಜ್ಜೆ ಹಾಕುತ್ತಲೇ ಕುಸಿದು ಬಿದ್ದು ಸಾವಿಗೀಡಾಗಿದ್ದಳು. ಆ ಮೂಲಕ ಅಂದಿನ ಸಂಭ್ರಮಕ್ಕೂ ಸಾವಿನ ಸೂತಕ ಆವರಿಸಿತ್ತು. ಅಂಥದ್ದೇ ಇನ್ನೊಂದು ಪ್ರಕರಣ ವರದಿಯಾಗಿದೆ.
ಮನೋಜ್ ವಿಶ್ವಕರ್ಮ (40) ಎಂಬಾತ ಮದುವೆ ಸಮಾರಂಭವೊಂದರಲ್ಲಿ ಖುಷಿಯಿಂದ ಕುಣಿಯುತ್ತಲೇ ಕುಸಿದು ಬಿದ್ದ ಪ್ರಕರಣವೊಂದು ನಡೆದಿದೆ. ಈ ಕುರಿತ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಪಿಪ್ಲಾನಿ ಕತ್ರ ಎಂಬಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಸಂಭ್ರಮದಲ್ಲಿದ್ದ ಯುವತಿ ಇಂದಿಲ್ಲ; ಸಂಬಂಧಿಕರ ಸಮಾರಂಭದಲ್ಲಿ ಕುಸಿದು ಬಿದ್ದು ಸಾವು..
ಸಂಬಂಧಿಯೊಬ್ಬರ ಮದುವೆಗೆ ಹೋಗಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಈತ ಸಾವಿಗೀಡಾಗಿದ್ದು, ಅದಾಗಿ ಕೆಲವು ದಿನಗಳ ಬಳಿಕ ವಿಡಿಯೋ ವೈರಲ್ ಆಗಿದ್ದರಿಂದ ಸಾವಿನ ಪ್ರಕರಣ ಬಹಿರಂಗಗೊಂಡಿದೆ. ಇದೇ ರೀತಿ ಅ. 18ರಂದು ರಮೇಶ್ ವಂಜಾರ (51) ಎಂಬಾತ ಗುಜರಾತ್ನ ದಾಹೊಡ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಕುಸಿದು ಬಿದ್ದು ಸಾವಿಗೀಡಾಗಿದ್ದ. ಮೊನ್ನೆಮೊನ್ನೆಯಷ್ಟೇ ಉಡುಪಿಯಲ್ಲಿ ಜ್ಯೋಸ್ನಾ ಎಂಬ ಯುವತಿ ರೋಸ್ ಸಮಾರಂಭದಲ್ಲಿ ಹೆಜ್ಜೆ ಹಾಕುತ್ತಲೇ ಕುಸಿದು ಬಿದ್ದಿದ್ದು, ಬಳಿಕ ಸಾವಿಗೀಡಾಗಿದ್ದಳು.