ನವವಿವಾಹಿತ ನೇಣುಬಿಗಿದುಕೊಂಡು ಆತ್ಮಹತ್ಯೆ

Spread the love

ನವವಿವಾಹಿತ ನೇಣುಬಿಗಿದುಕೊಂಡು ಆತ್ಮಹತ್ಯೆ

ಚಾಮರಾಜನಗರ: ಮದುವೆಯಾದ ಐದೇ ದಿನಕ್ಕೆ ನವವಿವಾಹಿತ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾನಗರ ಜಿಲ್ಲೆಯ ಕೊಳ್ಳೇಗಾಲದ ಜಿ.ಪಿ.ಮಲ್ಲಪ್ಪಪುರಂ ನಲ್ಲಿ ನಡೆದಿದೆ.

ಜಿ.ಪಿ.ಮಲ್ಲಪ್ಪಪುರಂ ನಿವಾಸಿ ಸತೀಶ್‌ ಬಾಬು (43) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು. ಈತ ಐದು ದಿನಗಳ ಹಿಂದೆ ಮೈಸೂರು ಜಿಲ್ಲೆ ತಿ.ನರಸಿಪುರ ತಾಲ್ಲೂಕಿನ ಕನ್ನಹಳ್ಳಿ ಗ್ರಾಮದ ಚೆನ್ನಾಜಮ್ಮ ಅವರನ್ನು ಅದ್ಧೂರಿಯಾಗಿ ವಿವಾಹವಾಗಿದ್ದನು.

ಇದಾದ ಮೂರು ದಿನಗಳ ಬಳಿಕ ತನಗೆ ಅನಾರೋಗ್ಯ ಇರುವುದರಿಂದ ಯಾವುದೇ ಸಂಪ್ರದಾಯ, ಆಚರಣೆಗಳು ಬೇಡ ಎಂದು ಸತೀಶ್‌ ಬಾಬು ಹೇಳಿದ್ದನು. ಕೃಷಿಕನಾಗಿದ್ದ ಈತ ಪ್ರತಿದಿನ ಎಂದಿನಂತೆ ಕೆಲಸ ಮಾಡುತ್ತಿದ್ದನು. ಆದರೆ ಭಾನುವಾರ ಬೆಳಿಗ್ಗೆ ಜಮೀನಿಗೆ ಹೋಗಿದ್ದವನು ಅಲ್ಲಿಂದ ಮನೆಗೆ ಹಿಂತಿರುಗಿ ಮನೆಯ ಕೊಠಡಿಗೆ ಹೋಗಿ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಾವಿನ ಹಿಂದೆ ನನಗೆ ಅನುಮಾನಗಳಿವೆ. ನನ್ನ ಗಂಡನ ಸಾವಿಗೆ ಅವರ ತಂದೆ ಲಿಂಗರಾಜು, ತಾಯಿ ಮಹದೇವಿ, ಸಂಬಂಧಿಕರಾದ ದೇವಾನಂದ್, ಪ್ರಕಾಶ್, ವಿಜಯಕುಮಾರ್ ಕಾರಣ. ಹಾಗಾಗಿ, ಅವರ ಮೇಲೆ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸತೀಶ್‌ ಬಾಬು ಪತ್ನಿ ಚೆನ್ನಾಜಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


Spread the love