ನಾಗಬನ ಧ್ವಂಸ ಮಾಡಿದ ಪ್ರಕರಣ – ಎಂಟು ಮಂದಿಯ ಬಂಧನ

Spread the love

ನಾಗಬನ ಧ್ವಂಸ ಮಾಡಿದ ಪ್ರಕರಣ – ಎಂಟು ಮಂದಿಯ ಬಂಧನ

ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೋಡಿ ಗ್ರಾಮದ ಬಂಗ್ರ ಕೂಳೂರು ಎಂಬಲ್ಲಿರುವ ಕೋಟ್ಯಾನ್ ಕುಂಟುಂಬದ ನಾಗಬನ ಮತ್ತು ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಎಂಬಲ್ಲಿರುವ ನಾಗಬನ ದ್ವಂಸ ಮಾಡಿ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸಫ್ವಾನ್‌ @ಚಿಪ್ಪು (25) ಕಾವೂರು, ಮೊಹಮ್ಮದ್‌ ಸುಹೇಲ್‌ (23) ಕಾವೂರು ಶಾಂತಿನಗರ, ಪ್ರವೀಣ್‌ ಅನಿಲ್‌ ಮೊಂತೆರೋ (27) ಪಂಜಿಮೊಗರು, ನಿಖಿಲೇಶ್‌ @ವಿಕ್ಕಿ (22), ಜಯಂತ (30), ಮಂಜುನಾಥ ಪೂಜಾರಿ (30), ಪ್ರತೀಕ್‌ (24) ಮತ್ತು ನೌಷಾದ್‌ (30) ಎಂದು ಗುರುತಿಸಲಾಗಿದೆ.

ಆರೋಪಿಗಳು ಕೋಮುಗಲಭೆ ಉಂಟುಮಾಡುವ ಉದ್ದೇಶದಿಂದ ಸಮಾಜದಲ್ಲಿ ಶಾಂತಿ ಕೇಡಿಸುವರೇ ದಕ್ಷಿಣ ಭಾರದತ ಪವಿತ್ರ ನಾಗಾರಾಧನೆಯ ನಾಗಬನದ ನಾಗನ ಮೂರ್ತಿಗಳನ್ನು ಅಕ್ಟೋಬರ್‌ 20 ರಿಂದ 23 ರ ಮಧ್ಯೆ ರಾತ್ರಿಕಾಲದಲ್ಲಿ ಕೂಳೂರು ಕೊಟ್ಯಾನ್ ಕುಂಟುಂಬಕ್ಕೆ ಸೇರಿದ ನಾನನದ ನಾಗನ ಒಂದು ಕಲ್ಲನ್ನು ಧ್ವಂಸಗೊಳಿಸಿ ಉಳಿದ 5 ಕಲ್ಲುಗಳನ್ನು ಅಪವಿತ್ರ ಮಾಡಿದ್ದು ಅಲ್ಲದೆ ನವೆಂಬರ್‌ 12ರಂದು ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಕಲ್ ಎಂಬಲ್ಲಿ ರಾತ್ರಿಕಾಲದಲ್ಲಿ ನಾಗಬನದ ಮೂರ್ತಿಯನ್ನು ಕಿತ್ತೆಎಸದು ಅಪವಿತ್ರಗೊಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದು ಇದರಲ್ಲಿ ಸಹಕರಿಸಿದ ಹಾಗೂ ಆರೋಪಿತರುಗಳಿಗೆ ಆಶ್ರಯ ನೀಡಿದ ಇತರ ವ್ಯಕ್ತಿಗಳನ್ನು ಬಂಧನ ಮಾಡಬೇಕಾಗಿರುತ್ತದೆ.

ಆರೋಪಿತರುಗಳು ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಸಂಚುರೂಪಿಸಿ ಮಾಡಿದ ಕೃತ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಮಾರ್ಗದರ್ಶನಂತೆ, ಈ ಕಾರ್ಯಚರಣೆಯನ್ನು ಡಿ.ಸಿ.ಪಿ. ರವರಾದ ಹರಿರಾಂ ಶಂಕರ್ (ಕಾ&ಸು), ಮತ್ತು ದಿನೇಶ ಕುಮಾರ್‌ (ಆಪರಾಧ ಸಂಚಾರ) ರವರ ನಿರ್ಧೇಶನದಂತೆ ಮಂಗಳೂರು ಉತ್ತರ: ಉಪವಿಭಾಗದ ಎ.ಸಿ.ಪಿ. ಮಹೇಶ ಕುಮಾರ್ ರವರ ನೇತೃತ್ವದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವ ಎಸ್ ಪಡೀಲ್ ರವರು ಹಾಗೂ ಸಿಬ್ಬಂದಿಗಳಾದ ಮೂಡುಬಿದ್ರೆ ಠಾಣಾ ಪಿಎಸ್‌ಐ ಸುಧೀಪ್, ಬಜಪೆ ಠಾಣಾ ಪಿ ಎಸ್ ಐ ರಾಘವೇಂದ್ರ ನಾಯ್ಕ, ಕಾವೂರು ಠಾಣಾ ಪಿಎಸ್‌ಐ ಹರೀಶ್ ಹಜ್ , ಎಎಸ್ ಐ, ಕುಶಲಮಣಿಯಾಣಿ, ಪಣಂಬೂರು ಠಾಣಾ ಎಎಸ್‌ಐ ರಾಮಚಂದ್ರ, ಹೆಚ್ : ಇಶಾಕ್, ಕಾವೂರು ಠಾಣ, ಸಿಬ್ಬಂದಿಗಳಾದ ಹೆಚ್ ಸಿ ಮೋಹನದಾಸ್, ಕೊಟ್ಯಾನ್, ಹೆಚ್ ಸಿ ದುರ್ಗಾಪ್ರಧಾದ್‌, ಶೆಟ್ಟಿ, ಹೆಚ್ ಸಿ ಕಿಶೋರ್ ಪೂಜಾರಿ, ತಚ್ ಸಿ ಪ್ರಮೋದ್ ಕೆ ಎಸ್, ಹೆಚ್ ಸಿ ಮೂಡುಬಿದ್ರೆ ಪೊಲೀಸ್ ಠಾಣಾ ಹೆಚ್ ಸಿ ಹುಸೇನ್, ಮಂಗಳೂರು ನಗರ ಕಂಪ್ಯೂಟರ್ ವಿಭಾಗದ ಹೆಚ್ ಸಿ ಮನೋಜ್, ಪಿಸಿ ಶ್ರೀಧರ, ಪಿಸಿ ಸಿಕಂದರ ಚಂಚಲಿ, ಪಿಸಿ ಸುರೇಶ ಕೊಳ್ಳಿ, ಪಿಸಿ ರಾಜೇಸಾಬ, ಪಿಸಿ ಶರಣಪ, ರವರುಗಳೊಂದಿಗೆ ನಡೆಸಿರುತ್ತಾರೆ.


Spread the love