Home Mangalorean News Kannada News ನಾನು ನೆಟ್ಟು ಬೆಳೆಸಿದ ಮರಗಳು ನನ್ನನ್ನು ಪೋಷಿಸುತಿವೆ – ಸಾಲು ಮರದತಿಮ್ಮಕ್ಕ

ನಾನು ನೆಟ್ಟು ಬೆಳೆಸಿದ ಮರಗಳು ನನ್ನನ್ನು ಪೋಷಿಸುತಿವೆ – ಸಾಲು ಮರದತಿಮ್ಮಕ್ಕ

Spread the love

‘ನಾನು ನೆಟ್ಟು ಬೆಳೆಸಿದ ಮರಗಳು ನನ್ನನ್ನು ಪೋಷಿಸುತಿವೆ’ – ಸಾಲು ಮರದತಿಮ್ಮಕ್ಕ

ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಪರಿಸರ ಪ್ರೇಮಿ, ಸಾಲು ಮರದತಿಮ್ಮಕ್ಕ ಮಾತನಾಡುತ್ತಾನನ್ನ ಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ನಾಲ್ಕು ಕಿಲೋ ಮೀಟರ್‍ವರಗೆ ನಾನು ಮತ್ತು ನನ್ನ ಪತಿ ಮರಗಳನ್ನು ನೆಟ್ಟು ಬೆಳೆಸಿದ್ದೆವು.ನಾವು ನೆಟ್ಟು ಬೆಳೆಸಿದ ಮರಗಿಡಗಳು ನಮ್ಮನ್ನು ಬೇರೆಯೆ ರೀತಿಯಲ್ಲಿ ಪೋಷಿಸಿವೆ. ಜೀವನದ ಸಂತೃಪ್ತಿಯನ್ನು ಕೊಡುವುದರ ಜೊತೆಗೆ ಪರಿಸರದಲ್ಲಿರುವ ಎಲ್ಲರಿಗೂ ಉತ್ತಮ ಆರೋಗ್ಯ ನೀಡಿವೆ. ನಾವು ಜೀವನದಲ್ಲಿ ಮುಂದೆ ಸಾಗುವಾಗ ನಮ್ಮ ಹಾದಿಯನ್ನು ಹಸಿರಾಗಿಸುವುದು ನಮ್ಮಕರ್ತವ್ಯವಾಗಿದೆ ಎಂದರು. ಅವರು ಬೆಸೆಂಟ್ ಮಹಿಳಾ ಕಾಲೇಜಿನ ಪರಿಸರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಹಸಿರು ಸೇನೆಯಾದಎನ್.ಎಸ್.ಎಸ್. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವೇದಿಕೆ ಮೇಲಿದ್ದಕುಂಡದಲ್ಲಿ ಸಸಿ ನೆಟ್ಟು ನೀರುಣಿಸಿದರು. ಪರಿಸರಕ್ಕೆ ಯಾವುದೇ ತಾರತಮ್ಯವಿಲ್ಲ ಎಂಬ ಸಂದೇಶವನ್ನು ಸಾರುವ ಜನಪದ ಗೀತೆಯನ್ನು ಹಾಡಿದರು.

image001salu-marada-thimmakka-20160725-001

ಅವರ ಮಗ ಉಮೇಶ್ ಬಿ.ಎನ್ ಮಾತನಾಡುತ್ತಾ 105 ವರ್ಷದತಿಮ್ಮಕ್ಕ ಇಂದಿಗೂ ದೂರದೂರ ಪ್ರಯಾಣಿಸುತ್ತ ಜನರನ್ನು ಪ್ರೋತ್ಸಾಹಿಸಿದ್ದಾರೆ ಹಾಗಿರುವಾಗ ನವ ತಾರುಣ್ಯದಲ್ಲಿರುವ ವಿದ್ಯಾರ್ಥಿಗಳು ಪರಿಸರರಕ್ಷಣೆಯ ಬಗೆಗಿನ ತಮ್ಮ ಕರ್ತವ್ಯವನ್ನು ಅರಿತುಕೊಳ್ಳಬೇಕು. ಆಧುನಿಕ ತಾಂತ್ರಿಕಯುಗದಲ್ಲಿ ಎಲ್ಲಾ ಉಪಕರಣಗಳು ದೊರಕಿದರೂ ತಾಜಾ ಗಾಳಿಗಾಗಿ ನಾವೆಲ್ಲ ಮರಗಳನ್ನೇ ಅವಲಂಬಿಸಿದ್ದೇವೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್‍ಕುಮಾರ್ ಶೆಟ್ಟಿ ಪಿ.ಮಾತನಾಡಿ ತಿಮ್ಮಕ್ಕರ ಭೇಟಿ ವಿದ್ಯಾರ್ಥಿಗಳಲ್ಲಿ ಪರಿಸರ ಬಗೆಗಿನ ಕಾಳಜಿಯನ್ನು ಹೆಚ್ಚಿಸಿ ಪರಿಸರ ರಕ್ಷಣೆಯನ್ನು ಪ್ರೋತ್ಸಾಹಿಸಿದೆ ಎಂದರು.

ಶ್ಯಾಮ್ ಸುಂದರ್‍ಕಾಮತ್, ಕಾರ್ಯದರ್ಶಿ, ಡಬ್ಲ್ಯೂಎನ್.ಇ.ಎಸ್‍ ಇವರು ಸಾಲುಮರದ ತಿಮ್ಮಕ್ಕನಿಗೆ ಕಾಲೇಜಿನ ಲಾಂಛನವಾದ ಸಾಂಪ್ರ್ರದಾಯಿಕ ದೀಪವನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಪರಿಸರವಾದಿ ದಿನೇಶ್ ಹೊಳ್ಳ,ಹಾಗೂ ತಿಮ್ಮಕ್ಕನ ಕುಟುಂಬದವರು ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗದ ಗಿರೀಶ್‍ಕುಮಾರ್ ಸ್ವಾಗತಿಸಿದರು. ಎನ್.ಎಸ್.ಎಸ್. ಸಂಯೋಜಕಿ ಪ್ರೊ.ಜಯಶ್ರೀ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರಾದಕು. ಅಪೂರ್ವಜೆ.ಕೆ. ಪ್ರಾರ್ಥನೆ ಹಾಡಿದರು, ಕು.ಕವನ ನಿರೂಪಿಸಿದರು.


Spread the love

Exit mobile version