
ನಾನೂ ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ಸಾರ್ವಜನಿಕರೂ ಕೂಡ ಮುಂದೆ ಬನ್ನಿ – ಸಿಎಂ ಬೊಮ್ಮಾಯಿ
ಉಡುಪಿ: ಪ್ರತಿಯೊಬ್ಬರೂ ಕೂಡ ಅಂಗಾಂಗ ದಾನಕ್ಕೆ ಮುಂದೆ ಬರುವಂತೆ ಈ ಮೂಲಕ ಇನ್ನೋಬ್ಬರ ಜೀವ ಉಳಿಸುವ ಪವಿತ್ರ ಕಾರ್ಯಕ್ಕೆ ಮುಂದಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಅವರು ಶುಕ್ರವಾರ ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ ಇಂದು ವಿಶ್ವ ಅಂಗಾಂಗ ದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇತ್ತೀಚೆಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ ಇದರಿಂದ ಬಹಳಷ್ಟು ಜೀವಗಳನ್ನು ಉಳಿಸಬಹುದು. ಇಂತಹ ಸಂದರ್ಭದಲ್ಲಿ ಹೆಚ್ಚಿನ ಜನ ಅಂಗಾಂಗ ದಾನಕ್ಕೆ ಮುಂದೆ ಬಂದರೆ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ನಾನೂ ಕೂಡ ಅಂಗಾಂಗ ದಾನಕ್ಕೆ ಸ್ವತಃ ಸಹಿ ಹಾಕುವುದರೊಂದಿಗೆ ಎಲ್ಲರಿಗೂ ಕೂಡ ಕರೆ ನೀಡುತ್ತಿದ್ದೇನೆ. ಈ ಮೂಲಕ ಮಣ್ಣಲ್ಲಿ ಮಣ್ಣಾಗುವ ಬದಲು ಇನ್ನೊಂದು ಜೀವ ಉಳಿಸಲು ಸಹಕಾರಿಯಾಗೋಣ ಎಂದರು.
ಶಾಲೆ ಆರಂಭದ ಚಿಂತನೆಯ ನಡುವೆ ಮಕ್ಕಳೀಗೆ ಹೆಚ್ಚು ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರ ಹಿನ್ನಲೆಯಲ್ಲಿ ಕೂಡಲೇ ತಜ್ಞರ ಸಮಿತಿಯ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
Good mindset of CM same is to adopted by every citizen donate usable parts of the body subjected to doctor’s advise pl..