ನಾರಾಯಣ ಗುರು‌ ಟ್ಯಾಬ್ಲೊಗೆ ವಿರೋಧ: ಬಿಜೆಪಿ ಸರಕಾರದ ಬಣ್ಣ ಬಯಲು – ರಮೇಶ್ ಕಾಂಚನ್

Spread the love

ನಾರಾಯಣ ಗುರು‌ ಟ್ಯಾಬ್ಲೊಗೆ ವಿರೋಧ: ಬಿಜೆಪಿ ಸರಕಾರದ ಬಣ್ಣ ಬಯಲು – ರಮೇಶ್ ಕಾಂಚನ್

ಉಡುಪಿ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕೇರಳ ಸರಕಾರ ಪ್ರಸ್ತಾಪಿಸಿದ ನಾರಾಯಣ ಗುರುಗಳ ಸ್ಥಬ್ಧಚಿತ್ರವನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಬಿಜೆಪಿ ಸರಕಾರ ಹಿಂದುಳಿದವರ ಬಗೆಗಿನ ತನ್ನ ನಿಜ ಬಣ್ಣ ಬಯಲು ಮಾಡಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಮಾನವ ಧರ್ಮದ ಸಾರವನ್ನು ಎತ್ತಿ ಹಿಡಿದ ನಾರಾಯಣ ಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸಿದ ಬಿಜೆಪಿ ಸರಕಾರದ ಕ್ರಮವು ಅಸ್ಪಶ್ಯತೆಯನ್ನು ಜೀವಂತವಾಗಿರಿಸುವ ಹುನ್ನಾರ. ಆ ಮೂಲಕ ಹಿಂದುಳಿದವರ, ದಲಿತರ ಹಕ್ಕುಗಳನ್ನು ಕಸಿಯುವ ಪ್ರಯತ್ನ. ಈ ಹಿಂದೆ ನಾರಾಯಣ ಗುರುಗಳನ್ನು ವಿರೋಧಿಸಿದ, ತಿರಸ್ಕರಿಸಿದ ಸಂಘ ಪರಿವಾರದ ಸಿದ್ಧಾಂತವು ಈಗಲೂ ಬಿಜೆಪಿ ಸರಕಾರದ ಮೂಲಕ ಅವರನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿರುವ ಕಾಂಚನ್, ನಾರಾಯಣ ಗುರುಗಳ ಅನುಯಾಯಿಯಾಗಿರುವ ಸಮುದಾಯಗಳು, ಇಂತಹ ಮಾನವ ವಿರೋಧಿ ಬಿಜೆಪಿ ಸರಕಾರವನ್ನು ವಿರೋಧಿಸಲು ಇದು ಸಕಾಲ ಎಂದಿದ್ದಾರೆ.


Spread the love