Home Mangalorean News Kannada News ನಾಲ್ಕು ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ

ನಾಲ್ಕು ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ

Spread the love

ಮಂಗಳೂರು: ವಿವಿಧ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೋಲಿಸರು ನಾಲ್ಕು ಮಂದಿ ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ನಿವಾಸಿಗಳಾದ ಮನ್ಸೂರ್ (19), ಶಬೀರ್ (19), ತೌಫಿಕ್ (22) ಹಾಗೂ ಬೆಳ್ತಂಗಡಿ ನಿವಾಸಿ ಮಜೀದ್ (25) ಎಂದು ಗುರುತಿಸಲಾಗಿದೆ.

theft-arrested-20160601

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೋರಸೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಾರ್ಯವ್ಯಾಪ್ತಿಯ ಅಧೀನ ಪೊಲೀಸ್ ಠಾಣೆಯಾದ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 26-05-2016 ರಂದು ವಿಟ್ಲದ ನೆಟ್ಲಮುಡ್ನೂರು ಗ್ರಾಮದ ಕುಕ್ಕರಬೆಟ್ಟು ಎಂಬಲ್ಲಿ ಯಮಹಾ RX-100 ದ್ವಿಚಕ್ರ ವಾಹನ ಕಳವು ವರದಿಯಾಗಿ ಪ್ರಕರಣ ದಾಖಲುಗೊಂಡಿರುತ್ತದೆ. ನಂತರ ಆರೋಪಿಗಳ ಪತ್ತೆ ಹಚ್ಚುವರೇ ಪಿಎಸ್‌ಐ ಪ್ರಕಾಶ್ ದೇವಾಡಿಗ ಮತ್ತು ಅವರ ವಿಶೇಷ ತಂಡ ದಿನಾಂಕ 31-05-2016 ರಂದು ಸಂಜೆ 18.00 ಗಂಟೆಗೆ ಉಕ್ಕುಡದಲ್ಲಿ ವಾಹನ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದ ಸಮಯ ಯಮಹಾ RX-100 ಮೋಟಾರ್ ಸೈಕಲನ್ನು ಅದರ ಸವಾರ ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೇ ಪೆರ್ಲದ ಕಡೆಗೆ ಸಾಗುತ್ತಿದ್ದ ಮೋಟಾರ್ ಸೈಕಲನ್ನು ತಡೆದು ನಿಲ್ಲಿಸಿದಾಗ ಬೈಕ್‌ನಲ್ಲಿದ್ದ ಇಬ್ಬರು ಓಡಲಾರಂಬಿಸಿದಾಗ ಅವರನ್ನು ಸುತ್ತುವರಿದು ಹಿಡಿದು ವಿಚಾರಿಸಲಾಗಿ ಸವಾರನ ಹೆಸರು ಮನ್ಸೂರ್ (19) ಮತ್ತು ಸಹಸವಾರ ಶಬೀರ್ (19) ಎಂದು ತಿಳಿಸಿರುತ್ತಾರೆ.ಅವರಲ್ಲಿ ಮೋಟಾರ್ ಸೈಕಲ್‌ನ ದಾಖಲೆಪತ್ರಗಳನ್ನು ಹಾಜರುಪಡಿಸಲು ತಿಳಿಸಿದಾಗ ಯಾವುದೇ ದಾಖಲೆಪತ್ರಗಳು ಇಲ್ಲವೆಂದು ತಿಳಿಸಿದ್ದು ವಿಚಾರಿಸಿದಾಗ ತಾವು ಸವಾರಿ ಮಾಡಿಕೊಂಡು ಬಂದಿದ್ದ ಬೈಕ್ ಕುಕ್ಕರಬೆಟ್ಟು ಎಂಬಲ್ಲಿ ಕಳವು ಮಾಡಿದ್ದೆಂದು ಅದರ ನಂಬರ್ ಪ್ಲೇಟ್ ತೆಗೆದು ಕೇರಳ ಕಡೆಗೆ ಮಾರಲು ಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ಸದ್ರಿಯವರನ್ನು ವಶಕ್ಕೆ ಪಡೆದು ಠಾಣೆಗೆ ತಂದು ಕೂಲಂಕುಷವಾಗಿ ವಿಚಾರಿಸಲಾಗಿ ಇವರಲ್ಲದೇ ಸಹಚರರಾದ ತೌಫಿಕ್ ಮತ್ತು ಮಜೀದ್‌ರೊಂದಿಗೆ ಪುತ್ತೂರು ನಗರ, ಸುಳ್ಯ, ಬೆಳ್ತಂಗಡಿ, ಮಡಿಕೇರಿ ಕಡೆಗಳಲ್ಲಿ ಹಲವು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದು ಅವುಗಳಲ್ಲಿ 5 ದ್ವಿಚಕ್ರ ವಾಹನಗಳನ್ನು ಮಾರಲು ಕಂಬಳಬೆಟ್ಟು ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅಡಗಿಸಿಟ್ಟದ್ದಾಗಿ ಹಾಗೂ ಉಳಿದ 5 ದ್ವಿಚಕ್ರ ವಾಹನಗಳನ್ನು ಕಾಸರಗೋಡು ಬಸ್‌ಸ್ಟ್ಯಾಂಡ್ ಬಿಗ್ ಬಜಾರ್ ಹಿಂಬದಿ ಇಟ್ಟಿರುವುದಾಗಿ ತಿಳಿಸಿದ್ದು, ಅವರು ತೋರಿಸಿಕೊಟ್ಟಂತೆ ವಿಟ್ಲ ಠಾಣಾ ಸಿಬ್ಬಂಧಿಯವರ ಸಹಕಾರದೊಂದಿಗೆ ಕಳವು ಮಾಡಿದ 11 ದ್ವಿಚಕ್ರ ವಾಹನಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಬಂಧಿತರಿಂದ ವಿಟ್ಲ ಠಾಣಾ ವ್ಯಾಪ್ತಿಯ ಕಳವಾದ ಯಮಹಾ RX -100 – 01, ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಕಳವು ಮಾಡಿದ ಹೋಂಡಾ ಡಿಯೋ ಸ್ಕೂಟರ್ -01, ಮಡಿಕೇರಿ ಗ್ರಾಮಂತರ ಠಾಣಾ ವ್ಯಾಪ್ತಿಯ ಕಳವಾದ ಹೋಂಡಾ ಡಿಯೋ ಸ್ಕೂಟರ್ -01, ಸುಳ್ಯ ಠಾಣಾ ವ್ಯಾಪ್ತಿಯ ಕಳವಾದ ಪಲ್ಸರ್ ಮೋಟಾರ್ ಸೈಕಲ್ -01, ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಕಳವಾದ ಯಮಹಾ FZ -01,ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಕಳವಾದ ಹೋಂಡಾ ಡಿಯೋ ಸ್ಕೂಟರ್ -03 ಹಾಗೂ ಯಮಹಾ FZ – 03 ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಕೆ.ಯು.ಬೆಳ್ಳಿಯಪ್ಪ , ಶ್ರೀ ಪ್ರಕಾಶ್ ದೇವಾಡಿಗ, ಪಿ.ಎಸ್.ಐ. ವಿಟ್ಲ, ಎ.ಎಸ್.ಐ. ಜಿ ರುಕ್ಮಯ ಮೂಲ್ಯ ಹಾಗು ಸಿಬ್ಬಂದಿಗಳಾದ ಜಿನ್ನಪ್ಪ ಗೌಡ, ಜಯಕುಮಾರ್, ರಾಮಚಂದ್ರ, ಪ್ರವೀಣ್ ರೈ, ರಕ್ಷಿತ್ ರೈ, ರಮೇಶ್, ಭವಿತ್ ರೈ, ಪ್ರವೀಣ್ ಕುಮಾರ್ ಲೋಕೇಶ್, ಸತೀಶ್, ಶ್ರೀಧರ್, ಮಪಿಸಿ ಗೀತಾ , ಮಪಿಸಿ ಪ್ರಮೀಳಾ ಕೆ.ಎಸ್, ರಘುರಾಮ, ಯೋಗೀಶ್, ಸಂಪತ್, ದಿವಾಕರ್ ಇವರುಗಳು ಈ ಪ್ರಕರಣವನ್ನು ಭೇಧಿಸುವಲ್ಲಿ ಸಹಕರಿಸಿರುತ್ತಾರೆ. ಈ ಕಳವು ಪ್ರಕರಣವನ್ನು ಭೇದಿಸಿದ ತಂಡಕ್ಕೆ 10,000/- ನಗದು ಬಹುಮಾನ ಮಂಜೂರು ಮಾಡಲಾಗಿದೆ


Spread the love

Exit mobile version