ನಾಲ್ಕು ಚಕ್ರದ ಸ್ಕೂಟರ್ ನಲ್ಲಿದ್ದರೂ ಮರೆತಿಲ್ಲ ಮಾನವೀಯತೆ: ವಿಶೇಷಚೇತನನ ಕಾರ್ಯಕ್ಕೆ ನೆಟ್ಟಿಗರು ಫಿದಾ

Spread the love

ನಾಲ್ಕು ಚಕ್ರದ ಸ್ಕೂಟರ್ ನಲ್ಲಿದ್ದರೂ ಮರೆತಿಲ್ಲ ಮಾನವೀಯತೆ: ವಿಶೇಷಚೇತನನ ಕಾರ್ಯಕ್ಕೆ ನೆಟ್ಟಿಗರು ಫಿದಾ

ಕುಂದಾಪುರ: ಜನರು ದಿನನಿತ್ಯದ ಬದುಕಿನ ಜಂಜಾಟಗಳಲ್ಲೇ ಬ್ಯೂಸಿಯಾಗಿರುವ ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಎನ್ನುವುದೇ ಮರೆಯಾಗಿ ಬಿಟ್ಟಿದೆ. ದೇಹದ ಅಂಗಾಂಗಗಳೆಲ್ಲವೂ ಸರಿಯಿದ್ದರೂ ಇನ್ನೊಬ್ಬರ ನೆರವಿಗೆ ಧಾವಿಸದೆ ತಾವಾಯ್ತು ತಮ್ಮ‌ಕೆಲಸವಾಯ್ತು ಎಂದಿದ್ದುಬಿಡುವ ಬಹುತೇಕ ಜನರ ಮಧ್ಯೆ ಇಲ್ಲೊಬ್ಬ ವಿಶೇಷ ಚೇತನ‌ ವ್ಯಕ್ತಿ ವಿಶಿಷ್ಟವಾಗಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಮಾಡಿದ ಆ ಮಾನವೀಯತೆಯ ಕೆಲಸವಾದರೂ ಏನೂ ಅಂತೀರಾ.. ಈ‌ ಸ್ಟೋರಿ ನೋಡಿ.

ಅದು ವಿಶೇಷಚೇತನ‌ ವ್ಯಕ್ತಿ ಕೂತು ಸವಾರಿ ಮಾಡುತ್ತಿರುವ ನಾಲ್ಕು ಚಕ್ರದ ಸ್ಕೂಟರ್. ಆ ಸ್ಕೂಟರ್ ಹಿಂಬದಿಯ ಗಾರ್ಡ್ ಕೈಯ್ಯಲ್ಲಿ ಹಿಡಿದು ತ್ರಿಚಕ್ರ ಸೈಕಲ್ ನಲ್ಲಿ ಕೂತು ಹೋಗುತ್ತಿರುವ ಇನ್ನೋರ್ವ ವಿಶೇಷಚೇತನ ವ್ಯಕ್ತಿ. ಸದ್ಯ ಈ ಚಿತ್ರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌. ಹೆಮ್ಮಾಡಿಯ ಜಾಲಾಡಿ ಸಮೀಪ ದಿನಸಿ ಅಂಗಡಿ ಹೊಂದಿರುವ ಸಂತೋಷ್ ಮಾನವೀಯತೆ ಮೆರೆದ ವ್ಯಕ್ತಿ.

ಸಂತೋಷ್ ಜಾಲಾಡಿ‌

ಕುಂದಾಪುರದ ತಾಲೂಕು ಪಂಚಾಯತ್ ಸಮೀಪವಿರುವ ವಿಶೇಷಚೇತನರ‌ ಕಚೇರಿಯಲ್ಲಿ ಕಳೆದ ಕೆಲ ದಿನಗಳಿಂದ ವಾಸವಿದ್ದ ಉತ್ತರಕನ್ನಡ ಜಿಲ್ಲೆಯ ವಿಶೇಷಚೇತನ ವ್ಯಕ್ತಿಯೋರ್ವರು ಇಂದು ತಮ್ಮೂರಾದ ಕಾರವಾರಕ್ಕೆ ತ್ರಿಚಕ್ರ ಸೈಕಲ್ ನಲ್ಲಿ ತೆರಳು ದುಸ್ಸಾಹಸಕ್ಕೆ ಮುಂದಾಗಿದ್ದರು. ಈ ವೇಳೆ ಅಲ್ಲೇ ಇದ್ದ ಸಂತೋಷ್ ಜಾಲಾಡಿ‌ ತನಕ ತಮ್ಮ ಸ್ಕೂಟರ್ ಸಹಕಾರದಿಂದ‌ ಸಹಾಯವಾಗಲು ನೆರವಾದರು. ಜಾಲಾಡಿಯಿಂದ ಸಂತೋಷನಗರದ‌ ತನಕ‌ ಹೆದ್ದಾರಿ ಏರಾಗಿದ್ದರಿಂದ ಮುಂದೆಯೂ ಅವರ ಸಹಾಯಕ್ಕೆ ನೆರವಾಗಿದ್ದು ಸೈಕಲ್ ಹೆಮ್ಮಾಡಿವರೆಗೂ ದಾಟಿಸಿ ಬಳಿಕ ವಾಪಾಸಾದರು. ಈ‌ ಫೋಟೊ ವೈರಲ್ ಆದ ಬಳಿಕ ಸಂತೋಷ್ ಅವರ ಸಂಪರ್ಕಕ್ಕೆ‌ ಮ್ಯಾಂಗಲೋರಿಯನ್‌ ಪ್ರತಿನಿಧಿ ಮುಂದಾಗಿದ್ದು, ಆ ವೇಳೆ ಪ್ರತಿಕ್ರಿಯಿಸಿದ ಸಂತೋಷ್ ಕಳೆದ ಕೆಲ‌ದಿನಗಳಿಂದ ವಿಶೇಷಚೇತನರ ಕಚೇರಿಯಲ್ಲಿ ವಾಸವಿದ್ದು ಇತ್ತೀಚೆಗೆ ಅವರೊಂದಿಗಿದ್ದ ಪತ್ನಿ ಅವರನ್ನು ತೊರೆದು ಹೋಗಿದ್ದರು. ಹೀಗಾಗಿ ಶನಿವಾರ ಮನೆಗೆ ಹೊರಟಿದ್ದಾರೆ ಎಂದಿದ್ದಾರೆ.

ಮಾನವೀಯ‌ ಕಾರ್ಯ ಸೆರೆ ಹಿಡಿದ ಯುವತಿ:
ಸಂತೋಷ್ ಮಾನವೀಯ ಕಾರ್ಯವನ್ನು ಹೆಮ್ಮಾಡಿಯ ವಿಘ್ನೇಶ್ವರ ಕಾಂಪ್ಲೆಕ್ಸ್ ನ‌ ಮೊದಲ‌ ಮಹಡಿಯ ಕಚೇರಿಯಲ್ಲಿ ಕೆಲಸಕ್ಕಿದ್ದ ಹೆಮ್ಮಾಡಿ ಬೈಲ್ ಮನೆ ನಿವಾಸಿ ಸುನೀತಾ ಪೂಜಾರಿ ಈ ಅಪರೂಪದ ಕ್ಷಣವನ್ನು ತನ್ನ ಮೊಬೈಲ್ ನಲ್ಲಿ‌ ತರಾತುರಿಯಲ್ಲಿ ಸೆರೆ ಹಿಡಿದಿದ್ದಾರೆ. ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಸಂತೋಷ್‌ ಮಾನವೀಯ ಕಾರ್ಯಕ್ಕೆ‌ ಸರ್ವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಚೇರಿಯಲ್ಲಿರುವ ಸಂದರ್ಭ ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ರಸ್ತೆಯತ್ತ ನೋಡಿದೆ. ತಕ್ಷಣವೇ ನನ್ನ ಕಣ್ಣಿಗೆ ಈ ಚಿತ್ರಣ ಬಿತ್ತು. ಬಳಿಕ‌ ಹೊರಗಡೆ ಓಡಿ‌ ಬಂದು ಫೋಟೊ ಕ್ಲಿಕ್ಕಿಸಲು ಪ್ರಯತ್ನಿಸಿದೆ. ಅಷ್ಟರಲ್ಲಾಗಲೇ ಅವರು ಮುಂದಕ್ಕೆ‌ ಪಾಸಾದರು. ನಾನು‌ ತೆಗೆದಿರುವ ಚಿತ್ರ. ಅಸ್ಪಷ್ಟವಾಗಿದ್ದರೂ ಅದನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಂಡೆ. ನಾನು‌ ತೆಗೆದ ಚಿತ್ರ ಎಲ್ಲೆಡೆ ವೈರಲ್‌ ಆಗುತ್ತಿದೆ ಎನ್ನುತ್ತಾರೆ ಮಾನವೀಯ ಕಾರ್ಯವನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿದ ಬೈಲ್‌ ಮನೆ ಸುನೀತಾ ಪೂಜಾರಿ.


Spread the love