ನಿಖಿಲ್ ಪುತ್ರನ ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ
ರಾಮನಗರ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಪುತ್ರ ಅವ್ಯಾನ್ ದೇವ್ ಮೊದಲ ವರ್ಷದ ಹುಟ್ಟುಹಬ್ಬದ ಹಿನ್ನಲೆಯಲ್ಲಿ ರಾಮನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ನಿಖಿಲ್ ಕುಮಾರಸ್ವಾಮಿ, ಪತ್ನಿ ರೇವತಿ, ತಾಯಿ ಅನಿತಾಕುಮಾರಸ್ವಾಮಿ ಜತೆಗಿದ್ದು ಪೂಜೆ ಸಲ್ಲಿಸಿದರು. ಈ ಸಂದರ್ಭ ಜೆಡಿಎಸ್ ಕಾರ್ಯಕರ್ತರು ಬೃಹತ್ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಗನಿಗೆ ಒಂದು ವರ್ಷ ವಾಗಿರುವ ಹಿನ್ನೆಲೆಯಲ್ಲಿ ತಂದೆ-ತಾಯಿ ನಂಬಿರುವ ರಾಮನಗರದ ಚಾಮುಂಡೇಶ್ವರಿ ತಾಯಿಯ ಆಶೀರ್ವಾದಕ್ಕಾಗಿ ಕುಟುಂಬದ ಜೊತೆಗೆ ಆಗಮಿಸಿದ್ದೇನೆ. ನನ್ನ ತಾತ ಮತ್ತು ತಂದೆ-ತಾಯಿ ಮಾಡಿರುವಂತೆ ಜನ ಸೇವೆ ಮಾಡಬೇಕು. ಅದರಲ್ಲೇ ದೇವರನ್ನ ಕಾಣಬೇಕು. ಅವ್ಯಾನ್ ಅಂದ್ರೆ ವಿಷ್ಣು ದೇವರ ಹೆಸರು, ದೇವ್ ಅಂದ್ರೆ ನನ್ನ ತಾತನ ಹೆಸರು ಹೀಗಾಗಿ ನನ್ನ ಮಗನಿಗೆ ಅವ್ಯಾನ್ ದೇವ್ ಎಂದು ಹೆಸರು ಇಟ್ಟಿರುವುದಾಗಿ ಹೇಳಿದರು.
ಜೆಡಿಎಸ್-123 ಮಿಷನ್ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಆದರೆ, ಪಂಚರತ್ನದ ಬಗ್ಗೆ ಜನರಿಗೆ ಮಾಹಿತಿ ನೀಡಲು ರಥೋತ್ಸವದ ಮೂಲಕ ಚಾಲನೆ ಸಧ್ಯದಲ್ಲೇ ದೊರೆಯಲಿದೆ. ನಾನು ಕೂಡ ಯುವ ಪಡೆ ಸಂಘಟನೆ ಮಾಡುವ ಜವಾಬ್ದಾರಿ ಹೊತ್ತಿದ್ದೇನೆ. ಆದರೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಇನ್ನು ನಿರ್ಧರಿಸಿಲ್ಲ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಅವರ ಜೊತೆಯಾಗಿ ಪಕ್ಷ ಸಂಘಟನೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಇಬ್ಬರೇ ಪಕ್ಷವನ್ನು ಸಂಘಟನೆಯ ಮಾಡುವುದಲ್ಲ. ಜತೆಗೆ, ಮೈಸೂರಿನ ಜಿ.ಟಿ.ಹರೀಶ್, ಉತ್ತರ ಕರ್ನಾಟಕದ ಶರಣ್ ಗೌಡ ಸೇರಿದಂತೆ ಹಲವಾರು ಯುವಕರು ಇದ್ದಾರೆ. ಎಲ್ಲರೂ ಸೇರಿ ಪಕ್ಷ ಸಂಘಟನೆ ಕೆಲಸಮಾಡುತ್ತೇವೆ. ಈ ಬಗ್ಗೆ ಹಲವು ಸಭೆ ಕೂಡ ಆಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಗೆ ಮಾಡುತ್ತೇವೆ ಎಂದು ಹೇಳಿದರು.
ಶಾಸಕಿ ಅನಿತಾಕುಮಾರಸ್ವಾಮಿ ಅವರು ಮಾತನಾಡಿ, ಕುಟುಂಬದ ಎಲ್ಲರ ಹುಟ್ಟು ಹಬ್ಬದಂದು ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ. ಪತಿ ಕುಮಾರಸ್ವಾಮಿ ಅವರಿಗೆ ಮತ್ತು ನಾನು ನಂಬಿಕೆ ಇಟ್ಟಿರುವ ಚಾಮುಂಡೇಶ್ವರಿ ದೇವಿ ಅನುಗ್ರಹ ಇರಲಿ ಎಂದು ಇಲ್ಲಿಗೆ ಬಂದಿರುವುದಾಗಿ ಹೇಳಿದರು.