Home Mangalorean News Kannada News ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

Spread the love

ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಉಡುಪಿ: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದ ವತಿಯಿಂದ ನೀಡಿದ ಉಚಿತ ಪಠ್ಯ ಪುಸ್ತಕಗಳು ಹಾಗೂ ವೆಂಟನಾ ಫೌಂಡೇಶನ್, ಉಡುಪಿ. ವತಿಯಿಂದ ನೀಡಿದ ನೋಟ್ ಪುಸ್ತಕಗಳ ವಿತರಣಾ ಸಮಾರಂಭ ಶಾಲೆಯ “ಎಫ್. ಎಕ್ಸ್. ಕರ್ನೇಲಿಯೊ” ಸಭಾ ಭವನದಲ್ಲಿ ಶನಿವಾರ ಜರುಗಿತು ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ, ಆಡಳಿತ ಪಾಲುದಾರರು, ಕಲ್ಕೂರ ಬಿಲ್ಡರ್ಸ್ & ಡೆವಲಪರ್ಸ್. ಹಾಗೂ ಆಡಳಿತ ನಿರ್ದೇಶಕರು, ಕಲ್ಕೂರ ರೆಫ್ರಿಜೀಯೆಷನ್ & ಕಿಚನ್ ಇಕ್ವಿಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ರಂಜನ್ ಕಲ್ಕೂರ ಪುಸ್ತಕಗಳ ವಿತರಣೆ ನೆರವೇರಿಸಿ ಮಾತನಾಡಿ ಬಾಲ್ಯದಲ್ಲಿ ಉತ್ತಮ ಶಿಕ್ಷಣ ಪಡೆದಾಗ ಮುಂದೆ ಉನ್ನತ ಸ್ಥಾನವನ್ನು ಏರಲು ಪ್ರಾಥಮಿಕ ಶಾಲಾ ಹಂತ ಅಡಿಪಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಕವಿತಾ ಶ್ರೀನಿವಾಸ್ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಕವಿತಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಬಾರಿತ್ತಾಯ ಇವರು ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು, ಶಾಲಾ ಅಧ್ಯಾಪಕ ವೃಂದ, ವಿದ್ಯಾರ್ಥಿಗಳ ಹೆತ್ತವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಶಾಲಾ ಮುಖ್ಯೋಪಾಧ್ಯಾಯರು ಸಂತೋಷ್ ಕರ್ನೇಲಿಯೊ  ಸ್ವಾಗತಿಸಿ, ಹಿರಿಯ ಶಿಕ್ಷಕರಾದ ರಾಮಪ್ಪ. ಎಸ್. ದೊಡಮನಿ ಯವರು ವಂದನಾರ್ಪಣೆ ಗೈದು.

ಹಳೆ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಅಮ್ಮುoಜೆ ಸದಾನಂದ ನಾಯಕ್ ರವರು ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version