ನಿಟ್ಟೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ
ಉಡುಪಿ: ಹಳೆ ವಿದ್ಯಾರ್ಥಿ ಸುವರ್ಣ ನಿಧಿ ಟ್ರಸ್ಟ್ (ರಿ.) ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾಂಗದಗಡಿ, ಉಡುಪಿ ಇವರ ಆಶ್ರಯದಲ್ಲಿ ಶೈಕ್ಷಣಿಕ ವರ್ಷ 2025-2026ನೇ ಸಾಲಿನ ಸಮವಸ್ತ್ರ ವಿತರಣೆ ಸಮಾರಂಭ ಬುಧವಾರ ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ “ಎಫ್ ಎಕ್ಸ್ ಕರ್ನೇಲಿಯೊ”ಸಭಾಭವನದಲ್ಲಿ ಟ್ರಸ್ಟ್ ಅಧ್ಯಕ್ಷ ಪಿ. ರಾಮಚಂದ್ರ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕರಂಬಳ್ಳಿ ವಾರ್ಡಿನ ಉಡುಪಿ ನಗರ ಸಭಾ ಸದಸ್ಯರಾದ ಕೆ. ಗಿರಿಧರ ಆಚಾರ್ಯ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ರಮೇಶ ಬಾರಿತ್ತಾಯ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಹಳೆ ವಿದ್ಯಾರ್ಥಿ ಸುವರ್ಣ ನಿಧಿ ಟ್ರಸ್ಟ್ (ರಿ.) ವತಿಯಿಂದ ರೂಪಾಯಿ 1.25 ಲಕ್ಷ ಮೌಲ್ಯದ ಸಿದ್ದ ಪಡಿಸಿದ ಉಚಿತ ಸಮವಸ್ತ್ರಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಿ ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ದಿಗೆ ತಮ್ಮ ಸಹಾಯ ಹಸ್ತ ನೀಡುವ ಭರವಸೆ ನೀಡಿದರು.
ಪ್ರಧಾನ ಅತಿಥಿಗಳಾಗಿ ಪಿ. ಉಪೇಂದ್ರ ಆಚಾರ್ಯ, ಅಧ್ಯಕ್ಷರು, ಎಸ್.ಕೆ. ಜಿ. ಐ. ಕೋ. ಆಪರೇಟಿವ್ ಸೊಸೈಟಿ (ಲಿ.) ಮಂಗಳೂರು, ಬಿ.ರಾಜಾರಾಮ ಭಟ್, ಸೆಂಚುರಿ ಫಾರ್ಮ್, ಪೆರಂಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಮಯೋಚಿತವಾಗಿ ಮಾತನಾಡಿದರು.
ವಿಶ್ವಸ್ಥ ಮಂಡಳಿ ಸದಸ್ಯರಾದ ಯು. ಜೆ. ಮಹಮ್ಮದ್ ಹನೀಫ್ ಸಂತೋಷ ನಗರ , ಹಯವದನ ಭಟ್, ಮಹೇಶ್ ಟಿ, ವಸಂತ ಎನ್. ಮತ್ತು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಬಾಲಚಂದ್ರ ಗಾಂವ್ಕರ್, ಕೃಷ್ಣಮೂರ್ತಿ ಆಚಾರ್ಯ, ಪ್ರೇಮಾ ಆಚಾರ್ಯ ಹಾಗೂ ಶಾಲಾ ಅಧ್ಯಾಪಕವೃಂದ ಮತ್ತು ಪುಟಾಣಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟ್ರಸ್ಟಿನ ಜತೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಬಿ. ಆಚಾರ್ಯ ಇವರು ಸ್ವಾಗತಿಸಿ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕರ್ನೇಲಿಯೊ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಶ್ವಸ್ಥ ಮಂಡಳಿ ಸದಸ್ಯರು ಹರೀಶ್ ಆಚಾರ್ಯರವರು ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಟ್ರಸ್ಟ್ ಖಜಾಂಚಿ ಅಮ್ಮುಂಜೆ ಸದಾನಂದ ನಾಯಕ್ ಇವರು ವಂದನಾರ್ಪಣೆಗೈದರು. ವಿಶ್ವಸ್ಥ ಮಂಡಳಿ ಸದಸ್ಯ ಕೃಷ್ಣ ಶ್ರೀಧರನ್ ಇವರು ಕಾರ್ಯಕ್ರಮ ನಿರೂಪಿಸಿದರು.