
ನಿತ್ಯಾನಂದರ ವಿಗ್ರಹದ ಶೋಭಾಯಾತ್ರೆ, ನವೀಕೃತ ಗರ್ಭಗೃಹ ಸಮರ್ಪಣೆ
ಉಡುಪಿ: ಭಗವಾನ್ ನಿತ್ಯಾನಂದ ಮಂದಿರದ ಪ್ರತಿಷ್ಠಾ ಮಹೋತ್ಸವ ಹಾಗೂ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ಕೊಡವೂರು ಶಿರಡಿ ಸಾಯಿಬಾಬ ಮಂದಿರದಿಂದ ಉಡುಪಿಯ ಜೋಡುಕಟ್ಟೆಯವರೆಗೆ ನಿತ್ಯಾನಂದರ ವಿಗ್ರಹವನ್ನು ಶೋಭಾಯಾತ್ರೆಯ ಮೂಲಕ ಮಂದಿರಕ್ಕೆ ಕರೆತರಲಾಯಿತು.
ಕೇರಳದ ವಿಶೇಷ ಪಂಚ ವಾದ್ಯ ಬಳಗ, ಭಜನಾ ತಂಡಗಳು, ಪಾರಂಪರಿಕ ಕಲಾತಂಡಗಳು ಭಾಗವಹಿಸಲಿದ್ದವು.
ಜನವರಿ 16ರಂದು ದೇವರ ಪ್ರತಿಷ್ಠಾ ಮಹೋತ್ಸವ ಹಾಗೂ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಶ್ರೀ ಕೃಷ್ಣನೂರಿನಲ್ಲಿ ನಿತ್ಯವೂ ಆನಂದ ಪಡೆಯಬೇಕೆನ್ನುವ ಉದ್ದೇಶದಿಂದ ಮನಸ್ಸುಗಳನ್ನು ಕೆರಳಿಸದೆ ಹೃದಯಗಳನ್ನು ಅರಳಿಸುವ ನೆಲೆಯಲ್ಲಿ ಶ್ರೀ ಭಗವಾನ್ ನಿತ್ಯಾ ನಂದ ಸ್ವಾಮಿ ಮಂದಿರ ಮಠ ಜೀರ್ಣೋದ್ಧಾರಗೊಂಡಿದೆ ಎಂದು ಮೂಡುಬಿ ದಿರೆಯ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು.
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ನವೀಕೃತ ಗರ್ಭಗೃಹ ಸಮರ್ಪಣೆ
ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ನವೀಕೃತ ಮಂದಿರ ಲೋಕಾರ್ಪಣೆ, ನವೀಕೃತ ಗರ್ಭಗೃಹ ಸಮರ್ಪಣೆ, ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ರವಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಶ್ರೀ ನಿತ್ಯಾನಂದರು ನೊಂದ ಮನಸ್ಸುಗಳನ್ನು ತಿಳಿ ಮಾಡಿದವರು. ತನ್ನ ಅದ್ಭುತ ಪಾವಾಡದ ಮೂಲಕ ನೊಂದ ಹೃದಯಗಳಿಗೆ ಸಾಂತ್ವಾನ ನೀಡುತ್ತಾ ಹೃದಯವನ್ನು ಅರಳಿಸುವ ಸತ್ಕಾರ್ಯ ಮಾಡಿದ ಮಹಾನ್ ಸಂತರು. ದೇ ವತಾ ಅನುಗ್ರಹ ಪ್ರಾಪ್ತಿಯಿಂದ ಎಲ್ಲ ಕೆಲಸ, ಕಾರ್ಯಗಳು ಸುಲಲಿತವಾಗಿ ಸಾಗಲಿದೆ ಎಂಬುದಕ್ಕೆ ಇದೀಗ ನವೀಕೃತಗೊಂಡ ಮಂದಿರ ಮಠವೇ ಸಾಕ್ಷಿಯಗಿದೆ ಎಂದು ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಿದರು.
ಕನ್ಯಾಡಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಸ್ವಿಜ್ಜರ್ಲ್ಯಾಂಡ್ ಆಧ್ಯಾತ್ಮ ಗುರು ಶ್ರೀ ಮೋಹನ್ಜಿ, ಬೇವಿನಕೊಪ್ಪ ಶ್ರೀ ವಿಜಯಾನಂದ ಸ್ವಾಮೀಜಿ, ಮಹಾಮಂಡಳೇಶ್ವರ ಶ್ರೀ ನಿತ್ಯಾ ನಂದ ಸರಸ್ವತಿ ಸ್ವಾಮೀಜಿ, ಗೌರಿಗದ್ದೆ ಅವಧೂತ ವಿನಯ ಗುರೂಜಿ ಆಶೀರ್ವಚನ ನೀಡಿದರು.
ಸ್ವಾಮೀಜಿಗಳೆಲ್ಲರೂ ಒಟ್ಟಾಗಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಂಬಯಿ ಉದ್ಯಮಿ ಕೆ.ಕೆ. ಆವರ್ಶೇಕರ್ ಅಧ್ಯಕ್ಷತೆ ವಹಿಸಿದ್ದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ. ಶಂಕರ್, ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಅಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ವಿ.ಕೆ. ಗ್ರೂಪ್ನ ಕೆ.ಎಂ. ಶೆಟ್ಟಿ, ಆರ್ಕಿಟೆಕ್ಟ್ ಶ್ರೀನಾಗೇಶ್ ಹೆಗ್ಡೆ, ಮಾಜಿ ಸಚಿವರಾದ ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಪ್ರಮೋದ್ ಮಧ್ವರಾಜ್, ಕಾಂಝಾಂಗಾಡ್ ಟ್ರಸ್ಟ್ನ ಎಂ. ನರಸಿಂಹ ಶೆಣೈ, ಕೆ. ಮೋ ಹ ನ್ ಚಂದ್ರನ್ ನಂಬಿ ಯಾರ್, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್, ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿಗಳಾದ ಉದ್ಯಮಿ ರವಿ ಶೆಟ್ಟಿ ಮುಂಬಯಿ, ಮನೋಹರ್ ಎಸ್. ಶೆಟ್ಟಿ, ವಾಸುದೇವ ಶೆಟ್ಟಿ, ಭಾಸ್ಕರ ಶೆಟ್ಟಿ, ರಾಜೇಶ್ ರೈ, ಸದಾಶಿವ ಶೆಟ್ಟಿ ಕನ್ಯಾನ, ಕಾಪು ದೇವಿಪ್ರಸಾದ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ನಗರಸಭೆ ಸದಸ್ಯ ವಿಜಯ ಕುಮಾರ್ ಕೊಡವೂರು, ಹರಿಪ್ರಸಾದ್ ಐತಾಳ್, ಗೌರವಾಧ್ಯಕ್ಷ ಜಯಕೃಷ್ಣ ಶೆಟ್ಟಿ ತೋನ್ಸೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.