ನಿದ್ದೆ ಮಾಡಿಕೊಂಡಿರುವ ಸಿಂಹವನ್ನೇ ನಂಬಿಕೊಂಡ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು – ಸಿಎಂ ಬೊಮ್ಮಾಯಿ

Spread the love

ನಿದ್ದೆ ಮಾಡಿಕೊಂಡಿರುವ ಸಿಂಹವನ್ನೇ ನಂಬಿಕೊಂಡ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು – ಸಿಎಂ ಬೊಮ್ಮಾಯಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಕ್ರಿಯಾಶೀಲವಾಗಿದ್ದಾರೆ. ಅದಕ್ಕೆ ತಕ್ಕ ಹಾಗೆ ನಮ್ಮ ದೇಶದ ಲಾಂಛನವಾಗಿರುವ ಸಿಂಹ ಸಶಕ್ತ ಹಾಗೂ ಘರ್ಜನಾ ರೂಪದಲ್ಲಿ ಇರಬೇಕು. ಆ ರೀತಿಯಲ್ಲಿ ಸಿಂಹ ಲಾಂಛನ ಇದೆ. ಆದರೆ ವಿರೋಧ ಪಕ್ಷದವರು ನಿದ್ದೆ ಮಾಡಿಕೊಂಡೇ ಇರುವ ಸಿಂಹವನ್ನು ನಂಬಿಕೊಂಡಿರುವ ಸಂಸ್ಕೃತಿಯವರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಅವರು ಸಿಂಹ ಲಾಂಛನ ಕುರಿತು ಕಾಂಗ್ರೆಸ್ ಟೀಕೆಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿ ಸಿಂಹದ ಲಾಂಛ ಉಗ್ರವಾಗಿದೆ, ವ್ಯಗ್ರವಾಗಿದೆ ಎಂಬುದು ನೋಡುವವರ ದೃಷ್ಟಿಕೋನವಾಗಿದೆ. ಕಾಂಗ್ರೆಸ್ ನವರು ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಭಾರತಕ್ಕೆ ಈಗ ಕ್ರಿಯಾಶೀಲವಾಗಿರುವ, ಚುರುಕಾಗಿರುವ ಪ್ರಧಾನಮಂತ್ರಿಗಳಿದ್ದಾರೆ. ಅದಕ್ಕೆ ತಕ್ಕಹಾಗೆ ನಮ್ಮ ದೃಷ್ಟಿಯಲ್ಲಿ ಸಿಂಹ ಸಶಕ್ತರೂಪವಾಗಿದೆ. ಆದರೆ ಕಾಂಗ್ರೆಸ್ ನವರು ನಿದ್ದೆ ಮಾಡಿಕೊಂಡೇ ಬಂದಂತಹ ಸಿಂಹವನ್ನು ನಂಬಿಕೊಂಡು ಬಂದವರು. ಆದ್ದರಿಂದ ಅವರಿಗೆ ಹಾಗೆ ಅನಿಸುತ್ತದೆ ಎಂದರು.

ಹೊಸ ಸಂಸತ್ ಭವನದ ಮೇಲೆ ರಾಷ್ಟ್ರೀಯ ಲಾಂಛನಕ್ಕೆ ಸಂಬಂಧಿಸಿದಂತೆ ವಿರೋಧಪಕ್ಷದವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೊಸ ಸಂಸತ್ ಭವನದ ಮೇಲೆ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಮುಖಚರ್ಯೆ ಬದಲಾಯಿಸಲಾಗಿರುವ ಆಗುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಾಮ್ರಾಟ ಅಶೋಕರ ಕಾಲದಲ್ಲಿದ್ದ ಸಿಂಹದ ಲಾಂಛನ ಮತ್ತು ಅಶೋಕ ಚಕ್ರದ ಲಾಂಛನವನ್ನೇ ಅಳವಡಿಸಿಕೊಳ್ಳಲಾಗಿದೆ ಎಂದರು.


Spread the love