ನಿರತ ಸಾಹಿತ್ಯ ಪ್ರಶಸ್ತಿಗೆ ಕೆ.ವಿ ಚಂದ್ರಕಲಾ ನಂದಾವರ ಆಯ್ಕೆ – ನ.6ರಂದು ನಿರತದ ಬೆಳ್ಳಿಹಬ್ಬ, ಪ್ರಶಸ್ತಿ ಪ್ರದಾನ

Spread the love

ನಿರತ ಸಾಹಿತ್ಯ ಪ್ರಶಸ್ತಿಗೆ ಕೆ.ವಿ ಚಂದ್ರಕಲಾ ನಂದಾವರ ಆಯ್ಕೆ – ನ.6ರಂದು ನಿರತದ ಬೆಳ್ಳಿಹಬ್ಬ, ಪ್ರಶಸ್ತಿ ಪ್ರದಾನ

ಬಂಟ್ವಾಳ: ನಿರತ ಸಾಹಿತ್ಯ ಸಂಪದ, ಕಡೆಗೋಳಿ ಬಂಟ್ವಾಳ ಇದರ ಈ ಬಾರಿಯ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ಕೆ.ವಿ ಚಂದ್ರಕಲಾ ನಂದಾವರ ಆಯ್ಕೆಯಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿನ ಇವರ ವಿಶೇಷ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೆಂಬರ್ 6ರಂದು ಬಿಸಿರೋಡ್‌ನ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿರುವ ನಿರತದ 25ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

1996ರಲ್ಲಿ ಸಮಾನ ಮನಸ್ಕ ಸಾಹಿತ್ಯಾಸಕ್ತರಿಂದ ಪ್ರಾರಂಭಗೊಂಡ ನಿರತ ಸಾಹಿತ್ಯ ಸಂಪದ ಹಲವು ಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಹಲವು ದಿಗ್ಗಜರಿಗೆ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

ಕೆ.ವಿ ಚಂದ್ರಕಲಾ ನಂದಾವರ: 1950ರಲ್ಲಿ ಜನಿಸಿದ ಇವರು ತಮ್ಮ‌ ಸ್ನಾತಕೋತ್ತರ ಶಿಕ್ಷಣದ ಬಳಿಕ ಶಿಕ್ಷಕಿ, ಉಪನ್ಯಾಸಕಿ ಹಾಗೂ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರಾಗಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಈ ನಡುವೆ ಹಲವಾರು ಕೃತಿ, ಕವನ ಸಂಕಲನ, ಲೇಖನ ಸಂಕಲನಗಳನ್ನು, ಅಧ್ಯಯನಾತ್ಮಕ ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ರಾಜ್ಯಮಟ್ಟದ ಪ್ರಶಸ್ತಿಗಳು ಅರಸಿ ಬಂದಿತ್ತು.

ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಇವರ ಇನ್ನೊಂದು ಕೃತಿಯು ಬಿಡುಗಡೆಗೆ ಸಿದ್ಧಗೊಂಡಿದೆ.


Spread the love