ನಿವೃತ್ತ ಮುಖ್ಯ ಶಿಕ್ಷಕ ಕಂದಾವರ ಕಂಗೊಳ್ಳಿಮನೆ ಕೆ ಪ್ರಭಾಕರ ಹೆಗ್ಡೆ ನಿಧನ

Spread the love

ನಿವೃತ್ತ ಮುಖ್ಯ ಶಿಕ್ಷಕ ಕಂದಾವರ ಕಂಗೊಳ್ಳಿಮನೆ ಕೆ ಪ್ರಭಾಕರ ಹೆಗ್ಡೆ ನಿಧನ

ಕುಂದಾಪುರ: ನಿವೃತ್ತ ಮುಖ್ಯ ಶಿಕ್ಷಕ ಕಂದಾವರ ಕಂಗೊಳ್ಳಿಮನೆ ಕೆ ಪ್ರಭಾಕರ ಹೆಗ್ಡೆ (89) ಅಲ್ಪಕಾಲದ ಅಸೌಖ್ಯದಿಂದಾಗಿ ಸೋಮವಾರ ಬೆಳಗ್ಗೆ ಅಂಪಾರು ಕಂಚಾರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

39 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು ಅಂಪಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದರು. ರಾಮಾಯಣ ವಾಚಕರಾಗಿದ್ದ ಅವರು ಪರಿಸರದ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದ ಅವರು ಅಪಾರ ಜನಮನ್ನಣೆ ಪಡೆದಿದ್ದರು.

ಮೃತರಿಗೆ ಪುತ್ರ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕಿರಣ್ ಹೆಗ್ಡೆ ಅಂಪಾರು ಹಾಗೂ ಬಂಧು-ಬಳಗದವರಿದ್ದಾರೆ.

ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮುಂತಾದವರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ. ಶೃದ್ದಾಂಜಲಿ ಸಲ್ಲಿಸಿದ್ದಾರೆ.


Spread the love

Leave a Reply

Please enter your comment!
Please enter your name here