ನಿವೃತ್ತ ಮೇಜರ್ ವಿಜಯಚಂದ್ರ ಅವರಿಗೆ ಮಾಜಿ ಶಾಸಕ ಲೋಬೊ ರವರಿಂದ ಸನ್ಮಾನ

Spread the love

ನಿವೃತ್ತ ಮೇಜರ್ ವಿಜಯಚಂದ್ರ ಅವರಿಗೆ ಮಾಜಿ ಶಾಸಕ ಲೋಬೊ ರವರಿಂದ ಸನ್ಮಾನ

ಭಾರತೀಯ ಸೇನಾ ಪಡೆ  ಯಲ್ಲಿ ಸುಮಾರು 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿ ಹುಟ್ಟೂರು ಬಜಾಲ್ ವೀರನಗರದಲ್ಲಿರುವ ತಮ್ಮ ಮನೆಯಲ್ಲಿ ವಾಸವಾಗಿದ್ದಾರೆ. ನಿವೃತ್ತರಾಗುವ ವೇಳೆಯಲ್ಲಿ ಅವರು ಅಸ್ಸಾಂ ನಲ್ಲಿರುವ ರೆಜಿಮೆಂಟ್ ಒಫ್ ಆರ್ಟಿಲ್ಲರಿ ಯಲ್ಲಿ ಮೇಜರ್ ಹುದ್ದೆಯಲ್ಲಿದ್ದರು. ಅವರು ದೇಶಕ್ಕೆ ಸಲ್ಲಿಸಿದ ಸೇವೆಗೆ ಇಂದು ತಾ 11.10.2022ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ವೀರನಗರದಲ್ಲಿರುವ ಮೇಜರ್ ವಿಜಯಚಂದ್ರ ರವರ ಮನೆಗೆ ತೆರಳಿ ಸನ್ಮಾನಿಸಿದರು.

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡುತ್ತ ಲೋಬೊರವರು, ಮೇಜರ್ ವಿಜಯಚಂದ್ರರವರು ಸುಮಾರು 13 ವರ್ಷಗಳ ಭಾರತೀಯ ಸೇನಾ ಪಡೆಯಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ್ದರು. ಕಠಿಣ ಹಿಮಪ್ರಪಾತ ಪ್ರದೇಶಗಳಾದ ಜಮ್ಮು, ಲಡಾಖ್, ಲೇಹ್,ಅಸ್ಸಾಂ ಮುಂತಾದ ಕಡೆಗಳಲ್ಲಿ ತನ್ನ ಅರೋಗ್ಯವನ್ನು ಲೆಕ್ಕಿಸದೇ ದೇಶ ಸೇವೆಗೈದರು.ಸಾಮಾನ್ಯ ಜನರಿಗೆ ಅಲ್ಲಿ ತಮ್ಮ ನಿತ್ಯಜೀವನವನ್ನು ಸಾಗಿಸಲು ಕಷ್ಟಕರವಾದ ಸ್ಥಳಗಳಾಗಿರುವುದರಿಂದ ವಿಜಯಚಂದ್ರರವರು ಅಲ್ಲಿಗೆ ಹೋಗಿ ಸೇವೆ ಮಾಡಿರುವುದು ನಮಗೆಲ್ಲರಿಗೂ ಬಹಳಷ್ಟು ಹೆಮ್ಮೆ ತಂದಿದೆ. ಭಗವಂತನು ಅವರಿಗೆ ಉತ್ತಮ ಭವಿಷ್ಯ ಕೊಡಲಿ. ಅವರ ಮನೆಯಲ್ಲಿ ಇಬ್ಬರು ಸಹೋದರರು ಸೇನೆಯಲ್ಲಿ ಕೆಲಸ ಮಾಡಿರುವುದು ಎಲ್ಲರಿಗೂ ಮಾದರಿ. ಅವರ ತಂದೆ ತಾಯಿ, ಮನೆಯರಿಗೂ ಭಗವಂತನು ಆಶೀರ್ವದಿಸಲಿ ಎಂದರು.

ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ಕಾರ್ಪೊರೇಟರ್ ಅಶ್ರಫ್ ಬಜಾಲ್, ಭರತೇಶ್ ಅಮೀನ್, ಟಿ. ಕೆ. ಸುಧೀರ್, ಚಂದ್ರಕಲಾ ಜೋಗಿ,ಜ್ಯೋತಿ ಅಶೋಕ್, ಮೇಸಿ ಡಿಸೋಜಾ,ನರೇಶ್ ಕುಮಾರ್, ಹರಿಪ್ರಸಾದ್, ಆಸೀಫ್ ಬಜಾಲ್, ಕೃತಿನ್ ಕುಮಾರ್, ಶಾನ್ ಡಿಸೋಜಾ, ಆಸೀಫ್ ಜೆಪ್ಪು, ಲಕ್ಷ್ಮಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Spread the love